ಕಾಸರಗೋಡು: ಜಿಲ್ಲಾ ಸಾಕ್ಷರತಾ ಮಿಷನ್ನ ಆಶ್ರಯದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ ಅಧ್ಯಕ್ಷತೆ ವಹಿಸಿದ್ದರು.
ಆರಂಭಿಕ ಸಾಕ್ಷರತಾ ಕಾರ್ಯಕರ್ತರು ಹಾಗೂ ಸಾಕ್ಷರರಾದ ಹಿರಿಯರು, ಸಮಾನಾಂತರ ಪರೀಕ್ಷೆಗಳಲ್ಲಿ ಉನ್ನತ ಸಾಧಕರಾದ ಶಿಕ್ಷಕರು, ಪ್ರೇರಕರನ್ನು ಗೌರವಿಸಲಾಯಿತು. ವಿಪತ್ತು ನಿರ್ವಹಣೆ ಕುರಿತು ಉಪನ್ಯಾಸ, ಸಾಕ್ಷರತಾ ಸಂದೇಶ, ಸಾಕ್ಷರತಾ ಪ್ರತಿಜ್ಞೆ ಕೈಗೊಳ್ಳಲಾಯಿತು. ಕಲಾ ಕಾರ್ಯಕ್ರಮಗಳೂ ನಡೆದವು.
ಸಾಕ್ಷರತಾ ಮಿಷನ್ ಮಾನಿಟರಿಂಗ್ ಸಂಯೋಜಕ ಶಾಜುಜೋನ್, ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಹಿರಿಯ ಸಾಕ್ಷರತಾ ಕಾರ್ಯಕರ್ತ ಪಪ್ಪನ್ ಕುಟ್ಟಮತ್, ಕೆ.ವಿ.ರಾವನ್, ಕೆ.ವಿ.ವಿಜಯನ್, ಮಾಯಿಲ್ಪಾಡಿ ರಾವನ್, ಸಿಪಿವಿ ವಿನೋದ್ ಕುಮಾರ್ ಮತ್ತು ಕೌನ್ಸಿಲರ್ ಅಫೀಲಾ ಬಶೀರ್, ಕೈಟ್ ಜಿಲ್ಲಾ ಸಂಯೋಜಕ ರೋಜಿ ಜೋಸೆಫ್, ಸತೀಶನ್ ಬೇವಿಂಜ, ಎಂ.ಉಮೇಶನ್, ಕೆ.ರಾಧಾಕೃಷ್ಣನ್, ಎಂ.ಶಮೀರ್, ಸಿ.ಕೆ.ಪುಷ್ಪ ಕುಮಾರಿ, ಕೆ.ಪಿ.ಪುಷ್ಪಲತಾ ಮೊದಲಾದವರು ಉಪಸ್ಥಿತರಿದ್ದರು.