ಜಿಲ್ಲೆ

ವಿಶ್ವ ಕೊಂಕಣಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ

Mangaluru - Hariprasad Rai



ಮಂಗಳೂರು : ರಾಜ್ಯದ ವಿವಿಧ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಕೊಂಕಣಿ ಬೋಧಿಸುವ ಶಿಕ್ಷಕರಿಗಾಗಿ ವಿಶ್ವ ಕೊಂಕಣಿ ಕೇಂದ್ರದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮಾತನಾಡಿ ‘ ಕೊಂಕಣಿ ಶಿಕ್ಷಣ ಅಭಿವೃದ್ಧಿ ಪಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಶಿಕ್ಷಣ ಯೋಜನೆಯ ಡಾ. ಕಸ್ತೂರಿ ಮೋಹನ ಪೈ ಕೇಂದ್ರದ ಸಹಕಾರದಿಂದ ಕರ್ನಾಟಕದಲ್ಲಿ ಕೊಂಕಣಿ ಶಾಲಾ ಶಿಕ್ಷಣ ಬೆಳೆದು ಬಂದ ರೀತಿಯನ್ನು ವಿವರಿಸಿದರು. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಎಂ.ಎ.
ಕೊಂಕಣಿ ವಿಭಾಗದ ಸ್ಥಾಪನೆ ಮತ್ತು ಕಳೆದ ಏಳು ವರ್ಷಗಳ ಚಟುವಟಿಕೆಗಳನ್ನು ಕೇಂದ್ರದ ಸಂಶೋಧನಾ
ವಿಭಾಗದ ನಿರ್ದೇಶಕ ಡಾ. ಬಿ. ದೇವದಾಸ ಪೈ ಇವರು ವಿವರಿಸಿದರು. ಪ್ರೊ. ಜಯವಂತ ನಾಯಕ ಕೊಂಕಣಿ ಅಧ್ಯಯನ ಪೀಠದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಕರಿಗೆ ತಲಾ 5 ಸಾವಿರ ರೂ.ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜಾ, ಕೋಶಾಧಿಕಾರಿ ಬಿ.ಆರ್.ಭಟ್,ಟ್ರಸ್ಟಿಗಳಾದ ಡಿ. ರಮೇಶ ನಾಯಕ್, ಮೆಲ್ವಿನ್ ರಾಡ್ರಿಗಸ್, ಗೋಕುಲ್ನಾಥ ಪ್ರಭು ಉಪಸ್ಥಿತರಿದ್ದರು. ರತ್ನಾಕರ ಕುಡ್ವ ವಂದಿಸಿದರು. ಟ್ರಸ್ಟಿ ಶಕುಂತಲಾ ಆರ್ ಕಿಣಿ ಕಾರ್ಯಕ್ರಮ ನಿರೂಪಿಸಿದರು.