ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ಘಟಕ ವತಿಯಿಂದ ವಿಶ್ವ ಐಇಇಇ ದಿನವನ್ನು ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ದಿಮತ್ತೆ ವಿಭಾಗದ ಮುಖ್ಯಸ್ಥ ಡಾ.ವೇಣುಗೊಪಾಲ ಪಿ.ಎಸ್. ಉದ್ಘಾಟಿಸಿದರು.  
ಜಿಲ್ಲೆ

ಬಂಟಕಲ್ ಕಾಲೇಜಿನಲ್ಲಿ ವಿಶ್ವ ಐಇಇಇ ದಿನಾಚರಣೆ

ಇಂದಿರಾ ಎನ್ ಕೆ

ಕಾರ್ಕಳ: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ಘಟಕ ವತಿಯಿಂದ ವಿಶ್ವ ಐಇಇಇ ದಿನವನ್ನ್ನು ಕಾಲೇಜು ಆವರಣದಲ್ಲಿ ಇತ್ತೀಚೆಗೆ ಆಚರಿಸಲಾಯಿತು.

ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ವಿಭಾಗ ಮುಖ್ಯಸ್ಥ ಡಾ.ವೇಣುಗೊಪಾಲ ಪಿ.ಎಸ್. ಕಾರ್ಯಕ್ರಮ ಉದ್ಘಾಟಿಸಿ ಐಇಇಇ ಸದಸ್ಯತ್ವದ ಪ್ರಯೋಜನ ಎಂಬ ವಿಷಯದ ಕುರಿತು ಮಾತನಾಡಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಐಇಇಇ ಘಟಕ ಒದಗಿಸುವ ಜಾಗತಿಕ ಮಾನ್ಯತೆಯ ಮಹತ್ವದ ಬಗ್ಗೆ, ವಿಶ್ವಾದ್ಯಂತ ವೃತ್ತಿಪರರು ಮತ್ತು ಸಂಶೋಧಕರೊಂದಿಗೆ ಐಇಇಇ ಸದಸ್ಯರನ್ನು ಸಂಪರ್ಕಿಸುವ ಸಮ್ಮೇಳನ, ಕಾರ್ಯಾಗಾರಗಳು ಮತ್ತು ವಿವಿಧ ನೆಟ್‌ವರ್ಕಿಂಗ್ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಸಂಸ್ಥೆಯ ಐಇಇಇ ಘಟಕ ಸಂಯೋಜಕ ಡಾ.ಸದಾನಂದ ಎಲ್. ಕಾರ್ಯಕ್ರಮ ಆಯೋಜಿಸಿದ್ದು, ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥಿಸಿದರು. ನಿಯೋಲಾ ಪ್ರಿನ್ಸಿಯಾ ಡಿಸಿಲ್ವಾ ಅತಿಥಿಗಳನ್ನು ಪರಿಚಯಿಸಿದರು. ಉಪ ಪ್ರಾಶುಪಾಲ ಡಾ.ಗಣೇಶ್ ಐತಾಳ್, ಡೀನ್‌ಗಳು ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.