ಜಿಲ್ಲೆ

ವಿಶ್ವ ಶ್ರವಣ ದಿನಾಚರಣೆ

ಪಂಕಜ ಕೆ.ಎಂ.

ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿಯಲ್ಲಿ ಬರುವ ಇಎನ್‌ಟಿ ವಿಭಾಗವು ಸೋಮವಾರ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ವಾಕಥಾನ್‌ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಚಾಲನೆ ನೀಡಿದರು. ಈ ವೇಳೆ ವೈದ್ಯ ವಿದ್ಯಾರ್ಥಿಗಳು ಜಾಗೃತಿ ಲಕಗಳನ್ನು ಹಿಡಿದು ಸಾಗುವ ಮೂಲಕ ಶ್ರವಣ ಆರೈಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಶಾಮಣ್ಣ ಇತರರು ಇದ್ದರು.