ಗದಗ: ಭಾರತೀಯ ರೆಡ್ ಕ್ರಾಸ್ ಭವನದಲ್ಲಿ “ನನ್ನ ಆರೋಗ್ಯ ನನ್ನ ಹಕ್ಕು” ಎಂಬ ಧೇಯ ವಾಕ್ಯದೊಂದಿಗೆ ವಿಶ್ವ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರದ ಖ್ಯಾತ ಚರ್ಮರೋಗ ತಜ್ಞರು ಹಾಗೂ ಕ್ರೀಡಾಪಟುಗಳಾದ ಡಾ. ತುಕಾರಾಮ ಸೂರಿ ಅವರು ಮಾತನಾಡುತ್ತಾ ಸರ್ವರಿಗೂ ಸರ್ವ ಆರೋಗ್ಯ ದೊರೆಯುವಂತಾಗಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಸದಾ ಕ್ರೀಡೆ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಆರೋಗ್ಯವಂತ ವ್ಯಕ್ತಿ ಅರಮನೆಯಲ್ಲಿರುವ ರಾಜಕುಮಾರನನ್ನು ನಾಚಿಸುವಂತಹ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಇನ್ನೂರ್ವ ಅತಿಥಿಗಳಾಗಿ ಆಗಮಿಸಿದ ವಾಲಿಬಾಲ್ ಕ್ರೀಡಾಪಟು ಮಾಲತಿ ಇನಾಮತಿ ಅವರು ಮಾತನಾಡುತ್ತಾ ಯಾವುದೇ ಒಬ್ಬ ವ್ಯಕ್ತಿ ದೈಹಿಕವಾಗಿ ಅಸಮರ್ಥರಾಗಿದ್ದರೂ ಮನೋಸಾಮರ್ಥ್ಯ ಅತ್ಯುತ್ತಮವಾಗಿದ್ದರೆ ಯಾವುದೇ ಸಾಧನೆಯನ್ನು ಸುಲಭವಾಗಿ ಸಾಧಿಸಬಹುದು ಎಂದರು. ಇದೇ ಸಂದರ್ಭದಲ್ಲಿ ನಗರದ ಖ್ಯಾತ ವ್ಯಾಪಾರಸ್ಥರೂ ಹಾಗೂ ದಾನಿಗಳಾದ ಸಂಸ್ಥೆಯ ಸದಸ್ಯರಾದ ಶ್ರೀ ಸಂಜಯ ಬಾಗಮಾರ ಹಾಗೂ ಇಂದಿರಾ ಬಾಗಮಾರ ದಂಪತಿಗಳು, ಡಾ. ಡಿಂಪಲ್ ಬಾಗಮಾರ ಅವರು ಸಂಸ್ಥೆಗೆ ಏಲೆಕ್ಟಾçನಿಕ್ ಗಡಿಯಾರವನ್ನು ಕೊಡುಗೆಯಾಗಿ ನೀಡಿದರು. ೧೦ ಜನ ಫಲಾನುಭವಿಗಳಿಗೆ ರೆಡ್ ಕ್ರಾಸ್ ವತಿಯಿಂದ ಹೈಜನಿಕ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಭಾಪತಿಗಳಾದ ಡಾ. ಆರ್ ಎನ್ ಗೋಡಬೋಲೆ ಅವರು ಮಾತನಾಡುತ್ತಾ ಆರೋಗ್ಯವನ್ನು ಸಧೃಡವಾಗಿಟ್ಟುಕೊಂಡರೆ, ಎಂತಹ ಕಷ್ಟದ ಕೆಲಸವನ್ನು ಸರಾಗವಾಗಿ ನಿರ್ವಹಿಸಬಹುದು. ಇಂದಿನ ಯುವಕರು ನಿರಾಶಾಭಾವನೆಯಿಂದ ಹಿಂಜರಿಯದೇ ಸದಾ ಕ್ರೀಯಾಶೀಲರಾಗಿ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಸದೃಢ ನಾಗರಿಕರಾದರೆ ದೇಶ ಸದೃಢವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ವೇದಿಕೆಯ ಮೇಲೆ ಉಪಸಭಾಪತಿಗಳಾದ ನಾರಾಯಣಪ್ಪ ಇಲ್ಲೂರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಸದಸ್ಯರಾದ ಡಾ|| ಚಾರುಮತಿ ಗೊಡಬೋಲೆ, ದ್ರಾಕ್ಷಾಯಿಣಿ ಮೂರಶಿಳ್ಳಿನ, ದಿನೇಶ ಜೈನ್ ಹಾಜರಿದ್ದರು. ಸಂಸ್ಥೆಯ ಗೌರವ ಖಜಾಂಜಿ ಪ್ರೋ. ಕೆ ಎಚ್ ಬೇಲೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಶ್ಚಿತಾ ಬಿಎಲ್ ಪ್ರಾರ್ಥಿಸಿದರು. ದಾನೇಶ್ವರಿ ಕೊಕ್ಕಳಕಿ ಹಾಗೂ ರುದ್ರಪ್ಪ ಕರಡಿ ಅವರು ಪರಿಚಯಿಸಿದರು. ಪ್ರಕಾಶ ಗಾಣಿಗೇರ ನಿರೂಪಿಸಿದರು. ವಾಗ್ದೇವಿ ಕುಲಕರ್ಣಿ ವಂದಿಸಿದರು.