ಬಿಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಅರಣ್ಯ ದಿನ ಆಚರಿಸಲಾಯಿತು. ಬಸವೇಗೌಡ, ತಿರುಮಲಾಪುರದ ರಾಜೇಗೌಡ, ರಾಮಚಂದ್ರ, ಫಾಲಾಕ್ಷ ಇದ್ದರು. 
ಜಿಲ್ಲೆ

ಬಿಳಗುಂದ ಶಾಲೆಯಲ್ಲಿ ವಿಶ್ವ ಅರಣ್ಯ ದಿನಾಚರಣೆ

ಅಭಿನಯ್ ಎಚ್.ಎಂ

ಬೈಲಕುಪ್ಪೆ: ವಿಶ್ವ ಅರಣ್ಯ ದಿನದ ಅಂಗವಾಗಿ ಪಿರಿಯಾಪಟ್ಟಣ ತಾಲೂಕಿನ ಬಿಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರೋಟರಿ ಮಿಡ್‌ಟೌನ್ ವತಿಯಿಂದ ಗುರುವಾರ ಗಿಡ ನೆಟ್ಟು ನೀರೆರೆಯಲಾಯಿತು.

ರೋಟರಿ ಮಿಡ್ ಟೌನ್ ಸದಸ್ಯ ಬಸವೇಗೌಡ ಮಾತನಾಡಿ, ಶಾಲಾವರಣದಲ್ಲಿರುವ ಗಿಡಗಳಿಗೆ ನೀರು ಹಾಕಿ ಪೋಷಿಸಿದರೆ ಮುಂದೊಂದು ದಿನ ಹೆಮ್ಮರವಾಗಿ ಬೆಳೆದು ರೈತರು ಮತ್ತು ಪಕ್ಷಿಗಳಿಗೆ ಅನುಕೂಲವಾಗಲಿದೆ ಎಂದರು.

ನಂತರ ಶಾಲೆಯ ನಲಿ-ಕಲಿ ಮಕ್ಕಳಿಗೆ ಚೇರ್‌ಗಳು ಮತ್ತು ಆಟದ ಸಾಮಗ್ರಿ ವಿತರಿಸುವ ಸಲುವಾಗಿ ಮುಖ್ಯಶಿಕ್ಷಕ ರಾಮಚಂದ್ರ ಅವರಿಗೆ ಹಸ್ತಾಂತರಿಸಲಾಯಿತು. ರೋಟರಿ ಮಿಡ್‌ಟೌನ್ ಅಧ್ಯಕ್ಷ ತಿರುಮಲಪುರದ ರಾಜೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಹೆಗ್ಗಡೆ, ಎಸ್‌ಡಿಎಂಸಿ ಅಧ್ಯಕ್ಷ ಫಾಲಾಕ್ಷ ಇತರರಿದ್ದರು.