ಜಿಲ್ಲೆ

ಬೃಂದಾವನ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಕೆ.ಆರ್.ಸಾಗರ: ವಿಶ್ವವಿಖ್ಯಾತ ಬೃಂದಾವನಕ್ಕೆ ಬುಧವಾರ ಸಾವಿರಾರು ಪ್ರವಾಸಿಗರು ಆಗಮಿಸಿದ್ದ ಕಾರಣ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸತತ ಐದು ದಿನಗಳಿಂದ ನಿತ್ಯವೂ ಸಾವಿರಾರು ಪ್ರವಾಸಿಗರು ಬೃಂದಾವನಕ್ಕೆ ಭೇಟಿ ನೀಡುತ್ತಿದ್ದು, ಬುಧವಾರ ಸಹ ಆಗಮಿಸಿದ್ದರು. ಹೀಗಾಗಿ ಸಂಜೆ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡಿದರು. ಬೃಂದಾವನದಲ್ಲಿರುವ ಪಾರ್ಕಿಂಗ್ ಜಾಗದಲ್ಲಿ ಸ್ಥಳದ ಕೊರತೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೀಗಾಗಿ ಕೆ.ಆರ್.ಸಾಗರ ಪೊಲೀಸರು ಟೋಲ್ ಬಳಿ ವಾಹನಗಳನ್ನು ಯೂ-ಟರ್ನ್ ಮಾಡಿ ವಾಪಸ್ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂತು.