ಜಿಲ್ಲೆ

ಮುಂದಿನ ಪೀಳಿಗೆಗೂ ಆಕ್ಸಿಜನ್ ಸಿಗುವಂತಾಗಲಿ: ವಲಯ ಅರಣ್ಯಾಧಿಕಾರಿ ಎಂ.ಎಸ್.ಚೈತ್ರಾ ಸಲಹೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಮುಂದಿನ ಪೀಳಿಗೆಗೂ ಬೆಲೆ ಕಟ್ಟಲಾಗದ ರೀತಿ ಆಕ್ಸಿಜನ್ ಸಿಗುವಂತಾಗಲಿ ಎಂದು ವಲಯ ಅರಣ್ಯ ಅಧಿಕಾರಿ ಎಂ.ಎಸ್.ಚೈತ್ರಾ ತಿಳಿಸಿದರು.

ತಾಲೂಕಿನ ಕಾರಸವಾಡಿ ಗ್ರಾಮದ ಚಿಕ್ಕಕೆರೆ ಹಿಂಭಾಗದ ಅನ್ನಪೂರ್ಣೇಶ್ವರಿ ನಗರ 17ನೇ ಕ್ರಾಸ್‌ನ ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆ, ಕಾವೇರಿ ನೀರಾವರಿ ನಿಗಮ, ಮಂಡ್ಯ ಮಧುರ ಲಯನ್ ಸಂಸ್ಥೆ, ಜಿಲ್ಲಾ ಯುವ ಪರಿಷತ್ ಮಂಡ್ಯ, ವಕೀಲರ ಸ್ನೇಹಕೂಟ ಮಂಡ್ಯ ಹಾಗೂ ಗ್ರಾಮ ಪಂಚಾಯಿತಿ ಬೇವಿನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರುವ ಸಾಧನೆಗಳು ಅಪಾರ. 1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲು ಅರಣ್ಯ ಪ್ರದೇಶ ಮಾಡಲು ಅಧಿಸೂಚನೆ ಮಾಡಿದ್ದರು. ನಮ್ಮ ಪೂರ್ವಜರು ಮಾಡಿರುವ ಸಣ್ಣ ಕೆಲಸಗಳನ್ನು ವಿಶ್ಲೇಷಣೆ ತಿಳಿದುಕೊಂಡು ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು.

ಇಂಜಿನಿಯರ್ ಕೆಂಪರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಗಿಡ ಮತ್ತು ಜಲಮೂಲ ರಕ್ಷಣೆ ಮಾಡದೆ ಹೋದರೆ ಬಹಳ ಕಷ್ಟವಾಗುತ್ತದೆ. ಆದ್ದರಿಂದ ಜಲಮೂಲ ಮತ್ತು ಕೆರೆಕಟ್ಟೆಗಳನ್ನು ಉಳಿಸೋಣ. ಗಿಡ ನೆಟ್ಟು ಹಸಿರು ಉಳಿಸಿದರಷ್ಟೆ ಉಸಿರು ಚೆನ್ನಾಗಿರುತ್ತದೆ ಎಂದು ಹೇಳಿದರು.

ವಕೀಲ ಕೆ.ಎಂ.ಬಸವರಾಜು ಮಾತನಾಡಿ, ಗಿಡ ನೆಡುವಾಗ ಸಂರಕ್ಷಣೆ ಮಾಡಲು ಸಾರ್ವಜನಿಕರು ಸಹಕಾರ ಕೊಡಬೇಕು. ಸರ್ಕಾರಿ ಜಾಗ ಹಾಗೂ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ ಸಾರ್ವಜನಿಕರು ಅನ್ಯತೆ ಭಾವಿಸದೆ ಸಂರಕ್ಷಿಸುವುದು ಮುಖ್ಯ ಎಂದು ಹೇಳಿದರು.

ಮಂಡ್ಯ ಮಧುರ ಲಯನ್ಸ್ ಸಂಸ್ಥೆಯ ಆನಂದ್, ದೇವೇಗೌಡ, ನಂದೀಶ್‌ಕುಮಾರ್, ವಿನಯ್‌ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಸುರೇಶ್, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ, ಸದಸ್ಯರಾದ ಮಾಲತಿ, ಕಾಳೇಗೌಡ, ಪಿಡಿಒ ಚಾಮರಾಜು, ಶಿಲ್ಪಶ್ರೀ, ಜಯಶಂಕರ್‌ಬಾಬು, ಕುಮಾರ್, ಸಿದ್ದೇಗೌಡ, ವಕೀಲರಾದ ಜಗದೀಶ್, ನಾಗರಾಜು ಇತರರಿದ್ದರು.