ಮೈಸೂರು: ಮನುಕುಲದ ಸಮತೋಲನ ಬದುಕಿಗೆ ಪರಿಸರ ಅತ್ಯವಶ್ಯಕವಾಗಿದ್ದು, ಪರಿಸರ ಮಹತ್ವ ಎಷ್ಟಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯುವುದು ಒಳಿತು ಎಂದು ಭೀಮಾ ಜ್ಯುವೆಲರ್ಸ್‌ನ ಮಾರುಕಟ್ಟೆ ಸಂಯೋಜಕ ಕೆ.ಚಂದ್ರಶೇಖರ್ ಹೇಳಿದರು.
ನಗರ ಬಿಎನ್ ರಸ್ತೆಯ ಭೀಮಾ ಜ್ಯುವೆಲರ್ಸ್‌ನಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಿ ಮಾತನಾಡಿದರು.
ಪರಿಸರ ಇಲ್ಲದೇ ಮನುಷ್ಯ ನೆಮ್ಮದಿಯಿಂದ ಬದುಕುವುದು ಅಸಾಧ್ಯ, ಒಂದು ಗಿಡ ನೆಟ್ಟರೆ ಪರಿಸರಕ್ಕೆ ಎಷ್ಟು ಕೊಡುಗೆ ನೀಡಿದಂತಾಗುತ್ತದೆ ಎಂಬುದನ್ನು ಮನಗಂಡು ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಜೀವನದ ಅಸ್ತಿತ್ವದಲ್ಲಿ ಪರಿಸರವು ಪ್ರಮುಖ ಪಾತ್ರ ವಹಿಸುತ್ತದೆ. ಭೂಮಿಯು ವಿವಿಧ ಜೀವಿಗಳಿಗೆ ನೆಲೆಯಾಗಿದೆ ಮತ್ತು ನಾವೆಲ್ಲರೂ ಆಹಾರ, ಗಾಳಿ, ನೀರು ಮತ್ತು ಇತರ ಅಗತ್ಯಗಳಿಗಾಗಿ ಪರಿಸರದ ಮೇಲೆ ಅವಲಂಬಿತರಾಗಿದ್ದೇವೆ. ಆದ್ದರಿಂದ, ಪ್ರತಿಯೊಬ್ಬ ವ್ಯಕ್ತಿಯು ನಮ್ಮ ಪರಿಸರವನ್ನು ಉಳಿಸುವುದು ಮತ್ತು ರಕ್ಷಿಸುವುದು ಮುಖ್ಯವಾಗಿದೆ ಎಂದರು.
ಭೀಮಾ ಜ್ಯುವೆಲರ್ಸ್‌ನ ಸಿಬ್ಬಂದಿ ಅನಿಲ್ ಕುಮಾರ್, ಪರ್ವೀಜ್, ತಬರೇಜ್ ಖಾನ್, ಭರತ್ ಇದ್ದರು.