ನಾಪೋಕ್ಲು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚೆಂಬು ಬಿಜೆಪಿ ರೈತಮೋರ್ಚಾ ಸಹಯೋಗದಲ್ಲಿ ಚೆಂಬು ಬಿಜೆಪಿ ಶಕ್ತಿಕೇಂದ್ರದಿಂದ ಬಾಲಂಬಿಯಲ್ಲಿ ವಿವಿಧ ಗಿಡಗಳನ್ನು ನೆಡುವ ಮೂಲಕ ಗುರುವಾರ ಪರಿಸರ ದಿನ ಆಚರಿಸಲಾಯಿತು.
ಶಕ್ತಿಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ, ಗ್ರಾ.ಪಂ.ಅಧ್ಯಕ್ಷ ತೀರ್ಥಾರಾಮ ಪೂಜಾರಿಗದ್ದೆ , ರೈತಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ನಿಡಿಂಜಿ, ಗ್ರಾ.ಪಂ.ಸದಸ್ಯರಾದ ರಮೇಶ್ ಹುಲ್ಲುಬೆಂಕಿ, ವಸಂತ ಊರುಬೈಲು, ಸೊಸೈಟಿ ನಿರ್ದೇಶಕರಾದ ದಿನೇಶ್ ಸಣ್ಣಮನೆ, ರಾಮಮೂರ್ತಿ ಉಂಬಳೆ , ವಸಂತ ಕುದ್ರೆಪಾಯ, ಮಾಜಿ ಉಪಾಧ್ಯಕ್ಷ ವಾಸುದೇವ ನಿಡಿಂಜಿ, ಕಾರ್ಯಕ್ರಮದ ಉಸ್ತುವಾರಿ ಅನಂತ್ ಊರುಬೈಲು ಇತರರು ಇದ್ದರು.