ಜಿಲ್ಲೆ

ಮಕ್ಕಳಲ್ಲಿ ಮೂಡಿಸಿ ಕೃಷಿಯ ಆಸಕ್ತಿ : ದೀನ್ ರಾಜ್ ಕಳವಾರ್ ಹೇಳಿಕೆ

ಸೌಮ್ಯ ಆರ್

ಹಳೆಯಂಗಡಿ: ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಜತೆಗೆ ಪರಿಸರ ರಕ್ಷಣೆಯ ಬಗ್ಗೆ ತಿಳಿವಳಿಕೆ ನೀಡಿ ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಕಾರ್ಯ ಅಭಿನಂದನೀಯ ಎಂದು ಕುಣಿತ ಭಜನಾ ಶಿಕ್ಷಕ ದೀನ್ ರಾಜ್ ಕಳವಾರ್ ಹೇಳಿದರು.

ಹಳೆಯಂಗಡಿ ಕಿಶೋರ-ಕಿಶೋರಿ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ವಿತರಣೆ, ವೃಕ್ಷ ಸಂರಕ್ಷಣೆ, ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವಕ ಮಂಡಲದ ಅಧ್ಯಕ್ಷರಾದ ನಾಗೇಶ್ ಟಿ.ಜಿ., ಯತೀಶ್ ಕೋಟ್ಯಾನ್, ಯುವತಿ ಮಂಡಲದ ಪ್ರಧಾನ ಕಾರ್ಯದರ್ಶಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಕೋಶಾಧಿಕಾರಿ ನಿರ್ಮಿತ, ಯುವತಿ ಮಂಡಲ ಸದಸ್ಯೆ ನಿಶಾ, ಪ್ರಚೇತ ಯುವಕ ಮಂಡಲ ಸದಸ್ಯರು ಉಪಸ್ಥಿತರಿದ್ದರು.

ಕಿಶೋರ-ಕಿಶೋರಿ ಸಂಘದ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಈ ಗಿಡಗಳನ್ನು ಮನೆಯ ಹಿತ್ತಲಿನಲ್ಲಿ ನೆಡಲು ತಿಳಿಸಲಾಯಿತು.