ಜಿಲ್ಲೆ

ವಿಶ್ವ ತುರ್ತು ಚಿಕಿತ್ಸಾ ದಿನಾಚರಣೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ತುರ್ತು ಚಿಕಿತ್ಸಾ ದಿನ ನಿಮಿತ್ತ ಎಸ್​ಡಿಎಂ ವೈದ್ಯಕಿಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದ ವತಿಯಿಂದ ಅಪಧಮನಿಯ ರಕ್ತದ ಅನಿಲ ವಿಶ್ಲೇಷಣೆ ಪ್ರಾಥಮಿಕ ಜ್ಞಾನ ಕುರಿತು ಸೋಮವಾರ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಎಸ್​ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನಕುಮಾರ ಕಾರ್ಯಾಗಾರ ಉದ್ಘಾಟಿಸಿದರು. ಆದಿಚುಂಚನಗಿರಿ ವೈದ್ಯಕಿಯ ಕಾಲೇಜಿನ ಪ್ರಾಧ್ಯಾಪಕ ಡಾ. ಮಹಾದೇವ, ಜೆ.ಜೆ. ವೈದ್ಯಕಿಯ ಕಾಲೇಜಿನ ಪ್ರಾಧ್ಯಾಪಕ ಡಾ. ಮಂಜುನಾಥ, ಬಿಎಲ್​ಡಿಇ ವೈದ್ಯಕಿಯ ಕಾಲೇಜಿನ ಪ್ರಾಧ್ಯಾಪಕ ಡಾ. ಉದಯ ಮತ್ತು ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಹಿರಿಯ ಪ್ರಾಧ್ಯಾಪಕರು ವಿಶೇಷ ಉಪನ್ಯಾಸ ನೀಡಿದರು.
ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲ ಡಾ. ವಿಜಯ ಕುಲಕಣಿರ್, ವೈದ್ಯಕಿಯ ಅಧೀಕ್ಷಕ ಡಾ. ಕಿರಣ ಹೆಗ್ಡೆೆ, ಉಪ ವೈದ್ಯಕಿಯ ಅಧೀಕ್ಷಕ ಡಾ. ಮಖ್ದೂಮ್​ ಕಿಲ್ಲೇದಾರ, ಉತ್ತರ ಕರ್ನಾಟಕದ ವಿವಿಧ ವೈದ್ಯಕಿಯ ಕಾಲೇಜುಗಳ ಸುಮಾರು 150ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ವೈದ್ಯಕಿಯ ವಿದ್ಯಾಥಿರ್ಗಳು ಭಾಗವಹಿಸಿದ್ದರು.
ಡಾ. ರಜನಿಕಾಂತ ಸ್ವಾಗತಸಿದರು, ಡಾ. ವಿಜಯಲಕ್ಷಿ$್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಚಿತಾ ವಂದಿಸಿದರು.