Shivasharane Hemaraddi Mallamma Jayanti 
ಜಿಲ್ಲೆ

ವಿಶ್ವ ಭೂಮಿ ದಿನಾಚರಣೆ ಇಂದು

ಗಿರೀಶ ಸಗರ

ಮುದ್ದೇಬಿಹಾಳ: ನ್ಯಾಯಾಲಯದ ಆವರಣದಲ್ಲಿ ಏ.22ರಂದು ಬೆಳಗ್ಗೆ 11 ಗಂಟೆಗೆ ವಿಶ್ವ ಭೂಮಿ ದಿನಾಚರಣೆ ಏರ್ಪಡಿಸಲಾಗಿದೆ.

ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂ, ಸರ್ಕಾರಿ ಇಲಾಖೆಗಳ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಸಿವಿಲ್​ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಉದ್ಘಾಟಿಸುವರು. ಸಿವಿಲ್​ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ಉಪಸ್ಥಿತರಿರುವರು.

ಸಂದ ಅಧ್ಯ ಶಶಿಕಾಂತ ಮಾಲಗತ್ತಿ ಅಧ್ಯತೆ ವಹಿಸುವರು. ನಾಗರಾಜ ಪೂಜಾರ, ಬಸವರಾಜ ಆಹೇರಿ, ಅಪರ ಸರ್ಕಾರಿ ವಕೀಲರಾದ ಎಚ್​.ಎಲ್​. ಸರೂರ, ತಹಸೀಲ್ದಾರ್​ ಬಲರಾಮ ಕಟ್ಟಿಮನಿ, ತಾಪಂ ಇಒ ನಿಂಗಪ್ಪ ಮಸಳಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಬಿಇಒ ಬಿ.ಎಸ್​. ಸಾವಳಗಿ, ಸಿಪಿಐ ಮೆಹಮ್ಮೂದ್​ ಸಿಯುದ್ದೀನ್​ ಉಪಸ್ಥಿತರಿರುವರು. ನ್ಯಾಯವಾದಿ ಎಸ್​.ಎಸ್​. ಬಿರಾದಾರ ಅವರು ವಿಶ್ವ ಭೂಮಿ ದಿನ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.