ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಷನ್ ವಾಜಿ ಅಧ್ಯಕ್ಷ ಜನಾರ್ದನ ಕೊಡವೂರು ಉದ್ಘಾಟಿಸಿದರು.  
ಜಿಲ್ಲೆ

ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ವಿಶ್ವ ಕಲಾ ದಿನಾಚರಣೆ

ಉಡುಪಿ: ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಮತ್ತು ಗ್ಯಾಲರಿಯಲ್ಲಿ ಮಂಗಳವಾರ ವಿಶ್ವಕಲಾ ದಿನಾಚರಣೆ ನಡೆಯಿತು.

ಉಡುಪಿ ವಲಯ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಶಿಯೇಷನ್ ಮಾಜಿ ಅಧ್ಯಕ್ಷ ಜನಾರ್ದನ ಕೊಡವೂರು ಮಾತನಾಡಿ, ವಿಶ್ವಾದ್ಯಂತ ಸೃಜನಶೀಲ ಚಟುವಟಿಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಕಲಾ ದಿನಾಚರಣೆ ಮೂಲಕ ಸವಾಜದ ನಡುವಿನ ಸಂಪಕರ್ವನ್ನು ಇನ್ನಷ್ಟು ಬಲಪಡಿಸಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ವಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ವಿದ್ಯಾರ್ಥಿಪೋಷಕಿ ವಾಣಿ ರಾವ್ ಉಪಸ್ಥಿತರಿದ್ದರು.

ವಿವಿಧ ಪ್ರಶಸ್ತಿ ಪ್ರದಾನ: ಇತ್ತೀಚಿಗೆ ನಡೆದ ಮಣಿಪಾಲ ಮತ್ತು ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸ್ಸಸ್‌ನ 19 ರಿಂದ 75 ವಯೋಮಿತಿಯ 23 ವಿದ್ಯಾರ್ಥಿಯರ ‘ಪರಂಪರಾ’ ಚಿತ್ರಕಲಾ ಪ್ರದಶನದ ಅಭಿನಂದನಾ ಪತ್ರ ಮತ್ತು ವಿವಿಧ ಪ್ರಶಸ್ತಿಗಳನ್ನು ಶ್ಯಾಮಲಾ ಎಸ್. ಕುಂದರ್ ವಿತರಿಸಿದರು. ದಿ ಬೆಸ್ಟ್ ಆರ್ಟ್ ವರ್ಕ್ ಪ್ರಶಸ್ತಿನ್ನು ಶರಣ್ ಎಸ್. ಕುವಾರ್, ದಿ ಬೆಸ್ಟ್ ಪಬ್ಲಿಕ್ ವೀವ್ಹ್ ಆರ್ಟ್ ಪ್ರಶಸ್ತಿಯನ್ನು ಉಜ್ವಲ್ ನಿಟ್ಟೆ ಹಾಗೂ ಲಕ್ಕಿ ವಿನ್ನರ್ ಪ್ರಶಸ್ತಿಯನ್ನು ಲತಾ ಭಾಸ್ಕರ್, ರೇವತಿ ಡಿ., ಯಶಾ ಜಿ, ಸುಷ್ಮಾ ಪೂಜಾರಿ, ಸಂಜನಾ ಶ್ರೀನಿವಾಸ್ ಅವರಿಗೆ ನೀಡಲಾಯಿತು. ಕಲಾ ಕೇಂದ್ರದ ಮಾಗದರ್ಶಕ, ಕಲಾವಿದ ಹರೀಶ್ ಸಾಗಾ ಸ್ವಾಗತಿಸಿದರು. ಕಲಾ ವಿದ್ಯಾರ್ಥಿಗಳಾದ ವಿಧು ಶಂಕರ್ ಬಾಬು ಪ್ರಾರ್ಥಿಸಿದರು. ಅರುಣಾ ನಾಯರ್ ಕಾರ್ಯಕ್ರಮ ನಿರೂಪಿಸಿದರು. ಉಜ್ವಲ್ ನಿಟ್ಟೆ ವಂದಿಸಿದರು.

ಮೊನಾಲಿಸಾ ರಂಗೋಲಿ

ಕಲಾವಿದ ಹರೀಶ್ ಸಾಗಾ ವಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅನುಷಾ ಆಚಾರ್ಯ, ಉಜ್ವಲ್ ನಿಟ್ಟೆ, ಅಶ್ವಿನಿ ಶೆಟ್ಟಿ, ಮೀತಾ ಪೈ ಅವರು ರಚಿಸಿದ 150 ಚದರ ಅಡಿ ವಿಸ್ತೀರ್ಣದ ಮೊನಾಲಿಸಾ ರಂಗೋಲಿ ಕಲಾಕೃತಿ ಆಕರ್ಷಣೀಯವಾಗಿತ್ತು.