ಹಾರೂಗೇರಿ: ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಜಗತ್ತೇ ಮೆಚ್ಚುವ ಸಾಧನೆ ಮಾಡಿ ಕಲಿಸಿದ ಶಿಕ್ಷಕರು ಹಾಗೂ ಪಾಲಕರಿಗೆ ಗೌರವ ತಂದುಕೊಡಬೇಕು ಎಂದು ಮುಖ್ಯಶಿಕ್ಷಕ ಬಿ.ಆರ್.ಆಜೂರ ಹೇಳಿದ್ದಾರೆ.
ಪಟ್ಟಣದ ಮಲ್ಲಿಕಾರ್ಜುನ ಶಿಕ್ಷಣ ಟ್ರಸ್ಟ್‌ನ ಲಿಟಲ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಿ.ಆರ್.ಆಜೂರ ಪ್ರೌಢ ಶಾಲೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿ, ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಸಮಯ ಹಾಳು ಮಾಡುವ ಬದಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದರು.ಸಮಾರಂಭದಲ್ಲಿ ಶಾಲೆ ಸಿಬ್ಬಂದಿ ಪವನಕುಮಾರ ಪತ್ತಾರ ಅವರನ್ನು ಗಣ್ಯರು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುಂಡಪ್ಪ ಆಜೂರು ವಹಿಸಿದ್ದರು. ಸಿದ್ದಲಿಂಗ ಸ್ವಾಮೀಜಿ, ನೆಲ್ಸನ್‌ಬಾಬು ಸಾನ್ನಿಧ್ಯ ವಹಿಸಿದ್ದರು. ಕೀರ್ತಿ ಗದಗ ವಾರ್ಷಿಕ ವರದಿ ಮಂಡಿಸಿದರು. ಪ್ರಜ್ಞಾ ಐತವಾಡೆ ಹಾಗೂ ಸವಿತಾ ದರೂರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕೆ.ಪಿ.ಬಾಲೋಜಿ, ಶ್ರೀಧರ ಆಜೂರ, ಸತೀಶ ಮಾಂಗ, ಅನಿಲ ಹಾಗೂ ವಿದ್ಯಾರ್ಥಿಗಳು ಇದ್ದರು. ಪವನಕುಮಾರ ಪತ್ತಾರ ನಿರೂಪಿಸಿದರು.