ಜಿಲ್ಲೆ

ಆತ್ಮರಕ್ಷಣಾ ತಂತ್ರ ಪ್ರಸ್ತುತ ಅನಿವಾರ್ಯ: ಕಾರ್ತಿಕ್ ಕಟೀಲ್ ಅಭಿಮತ

ಸೌಮ್ಯ ಆರ್

ಮೂಲ್ಕಿ: ಕಠಿಣ ಪರಿಸ್ಥಿತಿಗಳಲ್ಲಿ ತಮ್ಮನ್ನು ತಾವು ಯಾವ ರೀತಿಯಲ್ಲಿ ರಕ್ಷಿಸಿಕೊಳ್ಳಬೇಕೆಂಬ ಆತ್ಮ ರಕ್ಷಣಾ ತಂತ್ರಗಳನ್ನು ಮಹಿಳೆಯರು ಅರಿತುಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅನಿವಾರ್ಯಎಂದು ಸ್ವರಕ್ಷಾ ಫಾರ್ ವುಮನ್ ಟ್ರಸ್ಟ್ ಸಂಸ್ಥಾಪಕ ಕಾರ್ತಿಕ್ ಎಸ್. ಕಟೀಲ್ ಹೇಳಿದರು.

ಮೂಲ್ಕಿ ವಿಜಯ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ವಿಭಾಗದ ವತಿಯಿಂದ ಇತ್ತೀಚೆಗೆ ನಡೆದ ಮಹಿಳೆಯರ ಸ್ವರಕ್ಷಣೆಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಹಿಳೆಯರ ಸ್ವರಕ್ಷಣೆಯ ವಿವಿಧ ತಂತ್ರಗಳ ಪ್ರಾತ್ಯಕ್ಷಿಕೆ ನೀಡಿದರು.ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶೈಲಜಾ ಏತಡ್ಕ, ಶೋಭಾಲತಾ ಸುರೇಶ್, ಕಾರ್ಯಕ್ರಮದ ಸಂಯೋಜಕಿ ಶರ್ಮಿಳಾ ರಾಜೇಶ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಶೀಲತ್ ಸ್ವಾಗತಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಹರ್ಷಾ ನಿರೂಪಿಸಿದರು. ಶ್ರೀರಕ್ಷಾ ಮತ್ತು ಅಮೃತಾ ಅತಿಥಿಗಳ ಪರಿಚಯಿಸಿದರು. ಮಹಿಳಾ ದೌರ್ಜನ್ಯ ತಡೆ ವಿಭಾಗದ ವಿದ್ಯಾರ್ಥಿ ಕಾರ್ಯದರ್ಶಿ ಪೃಥ್ವಿ ನಾಯಕ್ ವಂದಿಸಿದರು.