ತೀರ್ಥಹಳ್ಳಿ: ಕುರುವಳ್ಳಿ ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಡಕೆ ಎಲೆಚುಕ್ಕೆ ರೋಗ ನಿವಾರಣೆಗೆ ಸಂಬAಽಸಿ ಶಿವಮೊಗ್ಗ ಅಡಕೆ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಸೆ.15ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜ ಅಡಿವಪ್ಪರ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಶೋಧನಾ ಕೇಂದ್ರದ ಅಧ್ಯಕ್ಷ ಎಂ.ಎಸ್.ಶ್ರೀಧರ್ ವಹಿಸಲಿದ್ದು ಮ್ಯಾಮ್ಕೋಸ್ ಉಪಾಧ್ಯಕ್ಷÀ ಮಹೇಶ್ ಹುಲ್ಕುಳಿ ಪಾಲ್ಗೊಳ್ಳುವರು. ಅಡಕೆ ಎಲೆಚುಕ್ಕೆ ರೋಗ ನಿವಾರಣೆಗೆ ಪೂರಕವಾಗಿ ಹೋಮಿಯೋಪತಿ ದ್ರಾವಣವನ್ನು ಸಿದ್ಧಪಡಿಸಲಾಗಿದೆ. ಆಸಕ್ತ ರೈತರು ಬರುವಾಗ ಅರ್ಧ ಲೀಟರ್ ನೀರನ್ನು ತರುವಂತೆ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಜ್ಜಿಗೆಸರ ತಿಳಿಸಿದ್ದಾರೆ.