ಮೈಸೂರು: ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ವಸಾಹತುಶಾಹಿ ಪರಂಪರೆ : ಶಕ್ತಿ, ಸಂಸ್ಕೃತಿ ಮತ್ತು ಗುರುತು ವಿಷಯದ ಕುರಿತು ಗುರುವಾರ ಕಾರ್ಯಾಗಾರ ನಡೆಯಿತು.
ನಗರದ ಸಂತ ಫಿಲೋಮಿನಾ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರವಿಂದ ಕಿಸ್ಪೊಟ್ಟ ಕಾರ್ಯಕ್ರಮ ಉದ್ಘಾಟಿಸಿ ಡೇನಿಯಲ್ ಡೆಫೋ ವಿರಚಿತ ಕಾದಂಬರಿ ರಾಬಿನ್ಸನ್ ಕ್ರೂಸೋ ಕುರಿತು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ವಸಾಹತುಶಾಹಿ ಪ್ರಭಾವವು ಗುರುತರವಾಗಿದೆ. ಅಸ್ತಿತ್ವ, ಪ್ರತ್ಯೇಕತೆ, ಧಾರ್ಮಿಕ ಚಿಂತನೆ ಮತ್ತು ವಸಾಹತುಶಾಹಿಯ ಪರಿಣಾಮಗಳು ಈ ಕಾದಂಬರಿಯಲ್ಲಿ ಪ್ರತಿಬಿಂಬಿತವಾಗಿವೆ ಎಂದರು.
ಪ್ರಾಂಶುಪಾಲ ಡಾ. ರೇಚಣ್ಣ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪಿ.ವಸುಮತಿ ಹಾಗೂ ಇತರರು ಇದ್ದರು. ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಪೌಷ್ಠಿಕಾಂಶ ಮತ್ತು ಆಹಾರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎ. ವಿನಯ್ ತಾಂತ್ರಿಕ ಅಧಿವೇಶನ ನಡೆಸಿಕೊಟ್ಟರು.