ಜಿಲ್ಲೆ

ಕಾನೂನು ವಿವಿಯಲ್ಲಿ ಗ್ರಂಥಪಾಲಕರಿಗೆ ಕಾರ್ಯಾಗಾರ

Dharwada - Basavaraj Idli

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಗ್ರಂಥಾಲಯ ವಿಭಾಗದಿಂದ ಕಾನೂನು ಮಹಾವಿದ್ಯಾಲಯಗಳ ಗ್ರಂಥಪಾಲಕರು, ಸಂಶೋಧನಾ ಅಭ್ಯರ್ಥಿಗಳು, ಕಾನೂನು ಶಾಲೆಯ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕಾರ್ಯಾಗಾರ ಮಂಗಳವಾರ ಏರ್ಪಡಿಸಲಾಗಿತ್ತು.

ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಡಾ. ಬಿ.ಡಿ. ಕುಂಬಾರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯದ ಸಂಪನ್ಮೂಲಗಳನ್ನು ಪ್ರಸ್ತುತ ದಿನಗಳಲ್ಲಿ ಅತ್ಯಂತ ಸೂಕ್ತ ಮತ್ತು ವ್ಯವಸ್ಥಿತ ರೀತಿಯಲ್ಲಿ ಆಧುನಿಕ ತಂತ್ರಜ್ಞಾನಗಳೊಂದಿಗೆ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

ತಜ್ಞರಾದ ಮೈಸೂರು ವಿವಿ ನಿವೃತ್ತ ಗ್ರಂಥಪಾಲಕ ಡಾ. ರಾಮಸೇಶ್ ಅವರು ಮಾತನಾಡಿ, ದೈನಂದಿನ ಬಳಕೆಯಲ್ಲಿ ಆನ್ ಲೈನ್ ಡಾಟಾ ಸಂಪನ್ಮೂಲಗಳು ಅಲ್ಲದೇ ಸಾಫ್ಟವೇರ್ ಲೈಬ್ರರಿ ಪ್ಯಾಕೇಜ್ ಗಳ ಸದ್ಬಳಕೆ ಹಾಗೂ ಯೆಂಜಲ್ ಬುಕ್ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಡಾ. ಸಿ. ಬಸವರಾಜು, ಲೈಬ್ರರಿ ಸಂಪನ್ಮೂಲಗಳು ಕಾನೂನಾತ್ಮಕ ಮಾಹಿತಿಗಳನ್ನು ಅಳವಡಿಸಿಕೊಳ್ಳಲು ತುಂಬಾ ಸಹಾಯಕವಾಗಿವೆ. ಸಂಯೋಜಿತ ಕಾನೂನು ಮಹಾವಿದ್ಯಾಲಯಗಳ ಗ್ರಂಥಾಲಯಗಳಲ್ಲಿಯೂ ಆನ್ ಲೈನ್ ಡೇಟಾ ಬೇಸ್ ಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಕುಲಸಚಿವೆ ಅನುರಾಧಾ ವಸ್ತ್ರದ ಹಾಗೂ ಪರೀಾಂಗ ವಿಭಾಗದ ಕುಲಸಚಿವೆ ಡಾ. ರತ್ನಾ ಭರಮಗೌಡರ ಉಪಸ್ಥಿತರಿದ್ದರು.