ಜಿಲ್ಲೆ

ತಂತ್ರಜ್ಞಾನ ಆವಿಷ್ಕಾರದಲ್ಲಿ ಭಾರತೀಯರು ವಿಫಲ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಿಲ್ಲ.‌ಹಾಗಾಗಿ ಈ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳ ಸಂಖ್ಯೆ ಏರುತ್ತಿಲ್ಲ ಎಂದು
ವಿಟಿಯು ಕುಲಪತಿ ಎಸ್ .ವಿದ್ಯಾಶಂಕರ  ಹೇಳಿದರು.
ನಗರದ ಎಸ್. ಜಿ.‌ಬಾಳೇಕುಂದ್ರ ತಂತ್ರಜ್ಞಾನ ‌ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ಸಂವೀಕ್ಷಣಾ ಕಾರ್ಯಾಗಾರ ಉದ್ಘಾಟಿಸಿ‌ಮಾತನಾಡಿದರು.
ನಾವೆಲ್ಲಾ ತಂತ್ರಜ್ಞಾನ ಕಂಡು ಹಿಡಿಯಲು ವಿಫಲವಾಗಿದ್ದೇವೆ. ಬೇರೆ ದೇಶಗಳಲ್ಲಿ ಕಂಡು ಹಿಡಿದಿರುವ ತಂತ್ರಜ್ಞಾನ ಹೆಚ್ಚು ಬಳಕೆ‌ಮಾಡುತ್ತಿದ್ದೇವೆ. ಹಾಗಾಗಿ ಆ ದೇಶಗಳಲ್ಲಿ ಉದ್ಯೋಗ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿ ಉದ್ಯೋಗ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.