ತಂಗಡಗಿ: ಇಲ್ಲಿನ ಹಡಪದ ಅಪ್ಪಣ್ಣದೇವರ ಮಹಾಸಂಸ್ಥಾನ ಮಠದಲ್ಲಿ ಜೂ.7 ರಿಂದ 9ರ ವರೆಗೆ ಧರ್ಮದರ್ಶಿಗಳ ಕಾರ್ಯಾಗಾರ ಏರ್ಪಡಿಸಲಾಗಿದೆ.
7ರಂದು ಬೆಳಗ್ಗೆ 10.30ಕ್ಕೆ ಕಾರ್ಯಾಗಾರ ಉದ್ಘಾಟನೆ ನಡೆಯಲಿದ್ದು, ಇಳಕಲ್ಲ ವಿಜಯಮಹಾಂತ ಮಠದ ಜಗದ್ಗುರು ಡಾ. ಗುರುಮಹಾಂತ ಸ್ವಾಮೀಜಿ, ಮಹಾಸಂಸ್ಥಾನಮಠದ ಪೀಠಾಧಿಪತಿ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ, ಶ್ರೀಮಠದ ಕಾರ್ಯಾಧ್ಯ ಎಂ.ಎಸ್. ನಾವಿ ಮುಧೋಳ ಅಧ್ಯತೆ ವಹಿಸುವರು.
ಅಖಿಲ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂದ ನಿಕಟಪೂರ್ವ ಅಧ್ಯ ಸಿದ್ದಣ್ಣ ಹಡಪದ ಮುಂಡಗೋಡ, ರಾಜ್ಯ ಹಡಪದ ನೌಕರರ ಸಂದ ರಾಜ್ಯಾಧ್ಯ ಪ್ರಕಾಶ ಹಡಪದ, ಕಲಬುರ್ಗಿ ವಿಶ್ವವಿದ್ಯಾಲಯದ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ನಿರ್ದೇಶಕ ಡಾ. ಬಾಬುರಾಯಣ್ಣ ಎಂ. ಧನ್ನೂರ, ಶ್ರಿಮಠದ ಪ್ರಧಾನ ಕಾರ್ಯದರ್ಶಿ ಸಿ.ಎ್. ನಾವಿ, ಕಾರ್ಯದರ್ಶಿ ಹಣಮಂತ್ರಾಯ ಗುಡದಿನ್ನಿ ಆಗಮಿಸುವರು.
9 ರಂದು ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ನಾಗಪ್ಪ ಹಡಪದ ಅಧ್ಯತೆ ವಹಿಸುವರು. ಮರೋಳದ ಗುರುಮಾತೆ ನೀಲಗಂಗಾಂಬಿಕೆ, ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಆಗಮಿಸುವರು.
ಮೂರೂ ದಿನಗಳಲ್ಲಿ 10 ವಿಶೇಷ ಉಪನ್ಯಾಸಗಳು ನಡೆಯಲಿವೆ. ಸಮಾಜದ ಕಲಾವಿದರು ವಿವಿಧ ಕಲೆಗಳ ಪ್ರದರ್ಶನ ಮಾಡಲಿದ್ದಾರೆ. ಮಾಹಿತಿಗೆ ಮೊ: 9997992996, 9972301711ಗೆ ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.