ಜಿಲ್ಲೆ

ಎಸ್‌ಡಿಎಂನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

ಸೌಮ್ಯ ಆರ್

ಬೆಳ್ತಂಗಡಿ: ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ’ಫೋನೆಟಿಕ್ಸ್ ಇನ್ ಆಕ್ಷನ್ : ಎಂಗೇಜಿಂಗ್ ಯಂಗ್ ಮೈಂಡ್ಸ್’ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್ ಇಂಡಿಯಾದ ಅಕಾಡೆಮಿಕ್ ಎಕ್ಸಲೆನ್ಸ್ ಮ್ಯಾನೇಜರ್ ವಿದ್ಯಾ ನಾರಾಯಣನ್ ಕಲಿಕೆಯಲ್ಲಿ ಮತ್ತಷ್ಟು ಚಟುವಟಿಕೆಗಳನ್ನು ಅಳವಡಿಸುವ ಕುರಿತಾಗಿ ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ಮಾಹಿತಿ ನೀಡಿದರು.

ಮುಖ್ಯಶಿಕ್ಷಕ ಮನ್ಮೋಹನ್ ನಾಯ್ಕ ಕೆ.ಜಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆಕ್ಸ್‌ಫರ್ಡ್ ಜೋನಲ್ ಮ್ಯಾನೇಜರ್ ಸುಜಿತ್, ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ ಹಾಗೂ ಮಂಗಳೂರು ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ಗಾರ್ಟನ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕಿ ಮಧುರ ಕಾರ್ಯಕ್ರಮ ನಿರೂಪಿಸಿದರು.