DR.ANANAD PAWNIS 
ಜಿಲ್ಲೆ

ಜೂ.27 ರಂದು ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Raichur - Reporter - Rachhai Swamy

 ರಾಯಚೂರು ಭಾರತ ವಿಕಾಸ್ ಪರಿಷತ್ತಿನಿಂದ ಜೂ.27 ರಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮುಂದಿನ ಆಯ್ಕೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆಂದು ಪರಿಷತ್ತಿನ ಅಧ್ಯಕ್ಷ ಡಾ.ಆನಂದತೀರ್ಥ ಫಡ್ನಿಸ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 10ನೇ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಘಟ್ಟ, ಅಲ್ಲಿಯವರೆಗೆ ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ತೆರನಾದ ಅಭ್ಯಾಸ ಕ್ರಮವಿದ್ದರೆ ಮುಂದೆ ಅದು ಬಹುಮುಖವಾಗಿ ಟಿಸಿಲೊಡೆಯುತ್ತದೆ. ಆಗ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಯ್ಕೆ ತುಂಬಾ ಕಠಿಣಕರವಾಗಿ ಪರಿಣಮಿಸುತ್ತದೆ. ಹಾಗಾಗಿ ಪಾಲಕರು ಮತ್ತು ವಿದ್ಯಾರ್ಥಿಗಳು ಪರಿಣತರೊಂದಿಗೆ ಚರ್ಚಿಸಲು ಒಂದು ವೇದಿಕೆಯ ಅವಶ್ಯಕತೆ ಇದ್ದು, ಆ ವೇದಿಕೆಯನ್ನು ಕಲ್ಪಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಭೀಮಸೇನ್ ರಾವ, ರಾಘವೇಂದ್ರ ವಿ. ಕಾಂತನವರ, ಬಾಬುರಾವ್ ಶೇಗುಣಸಿ, ಶ್ರಾವಣ ಕುಮಾರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಲಿದ್ದಾರೆ ಎಂದರು. ವಿದ್ಯಾರ್ಥಿಗಳ ಸುಭದ್ರ ಭವಿಷ್ಯಕ್ಕಾಗಿ ಅವರ ಮುಂದಿನ ವಿದ್ಯಾಭ್ಯಾಸ ಸೂಕ್ತ ಆಯ್ಕೆಗಾಗಿ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎನ್.ಎಸ್. ಗುರುಮೂರ್ತಿ,ರಾಮರಾವ್ ಕುಲಕರ್ಣಿ,ಅಶ್ವಿನಿ, ನಿವೇದಿತಾ ಇದ್ದರು.