ಜಿಲ್ಲೆ

ಮಧ್ವವಾದಿರಾಜ ಮಹಾವಿದ್ಯಾಲಯದಲ್ಲಿ ಕಾರ್ಯಾಗಾರ

ಇಂದಿರಾ ಎನ್ ಕೆ

ಕಾರ್ಕಳ: ಬಂಟಕಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ಇಂಜಿನಿಯರಿಂಗ್ ವಿಭಾಗ ಬೆಂಗಳೂರಿನ ಕೋರ್ ಇಎಲ್ ಟೆಕ್ನಾಲಜೀಸ್ ಮತ್ತು ಕಾಲೇಜಿನ ಐಎಸ್‌ಟಿಇ ಸಹಯೋಗದೊಂದಿಗೆ ‘ಇಂಜಿನಿಯರಿಂಗ್ ಇಂಟೆಲಿಜೆನ್ಸ್ ಅಡ್ವಾನ್ಸ್‌ಡ್ ಟೆಕ್ನಿಕ್ ಇನ್ ಮ್ಯಾಟ್‌ಲ್ಯಾಬ್’ ವಿಷಯದ ಕುರಿತು ಐದು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಿತು. ಕೋರ್ ಇಎಲ್ ಟೆಕ್ನಾಲಜೀಸ್ ಮ್ಯಾಥ್ಸ್ ವರ್ಕ್‌ನ ಹಿರಿಯ ಇಂಜಿನಿಯರ್ ರಕ್ಷಿತ್ ಬಿ.ಎಸ್ ಕಾರ್ಯಾಗಾರ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಮುಖ್ಯಸ್ಥರು, ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.