ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸಂಯೋಜಿತ ಕಾನೂನು ಮಹಾವಿದ್ಯಾಲಯಗಳ ವಿದ್ಯಾಥಿರ್ ಕ್ಷೇಮಾಭಿವೃದ್ಧಿ ವಿಭಾಗದ ಉಪ ನಿರ್ದೇಶಕರ ವಾರ್ಷಿಕ ಸಭೆ ಮತ್ತು ಅಭಿಶಿಕ್ಷಣ ಕಾರ್ಯಾಗಾರ ಗುರುವಾರ ಏರ್ಪಡಿಸಲಾಗಿತ್ತು.
ವಿವಿ ಹಣಕಾಸು ಅಧಿಕಾರಿ ಮತ್ತು ಕಾನೂನು ಶಾಲೆಯ ಡೀನ್ ಡಾ. ಜಿ.ಬಿ. ಪಾಟೀಲ ಮಾತನಾಡಿ, ವಿದ್ಯಾಥಿರ್ಗಳ ಮನ ಪರಿವರ್ತನೆಯೇ ಸಮಾಜದ ಬದಲಾವಣೆ ಎಂಬ ದೃಷ್ಟಿಕೋನ ಇಟ್ಟುಕೊಂಡು ವಿದ್ಯಾಸಂಸ್ಥೆಗಳು ಅವರ ವ್ಯಕ್ತಿತ್ವ ವಿಕಸನದ ನಿಟ್ಟಿನಲ್ಲಿ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ವಿದ್ಯಾರ್ಥಿಗಳ ಹಿತದೃಷ್ಟಿ ಮರೆತರೆ ಅಧ್ಯಾಪಕ ಅವರ ಭವಿಷ್ಯ ರೂಪಿಸಲಾರ. ವಿದ್ಯಾಥಿರ್ಗಳನ್ನು ದೇಶದ ಆಸ್ತಿಯನ್ನಾಗಿ ರೂಪಿಸುವ ಜವಾಬ್ದಾರಿ ವಿದ್ಯಾಸಂಸ್ಥೆಗಳ ಮೇಲಿದೆ. ಆಯಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗವು ಕುಂದುಕೊರತೆಗಳನ್ನು ನಿಷ್ಪಕ್ಷಪಾತದಿಂದ ಬಗೆ ಹರಿಸಬೇಕು. ಎಲ್ಲ ಕಡೆ ಕುಂದುಕೊರತೆ ಪರಿಹಾರ ಘಟಕ ಕಡ್ಡಾಯವಾಗಿ ಸ್ಥಾಪಿಸಬೇಕೆಂದು ಹೇಳಿದರು.
ಆಡಳಿತಾಂಗ ಕುಲಸಚಿವರಾದ ಅನುರಾಧಾ ವಸ್ತ್ರದ, ಮೌಲ್ಯಮಾಪನ ಕುಲಸಚಿವರಾದ ಡಾ. ರತ್ನಾ ಭರಮಗೌಡರ ಉಪಸ್ಥಿತರಿದ್ದರು. 70ಕ್ಕೂ ಹೆಚ್ಚು ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಉಪನಿರ್ದೇಶಕರು ಭಾಗವಹಿಸಿದ್ದರು.
ಡಾ. ಕೆ.ಸಿ. ಗಿರೀಶ್ ಸ್ವಾಗತಿಸಿದರು. ಡಾ. ಪಾರ್ವತಿ ಎಂ. ಕಾರ್ಯಕ್ರಮ ನಿರೂಪಿಸಿದರು. ಪ್ರಮತಿ ಎಚ್. ಪ್ರಾಥಿರ್ಸಿದರು. ಮೋಹನ್ ಆರ್. ವಂದಿಸಿದರು.