ಕಾರ್ಕಳ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸ್‌ಟಾ ಸ್ಕಿಲ್ ಮತ್ತು ಕಮ್ಯುನಿಕೇಶನ್ ಸ್ಕಿಲ್ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರಿನ ವಿಶೇಷ ಅಧಿಕಾರಿ ಡಾ.ದಾಮೋದರ ನಾರಲ್ ಕಾರ್ಯಾಗಾರ ಉದ್ಘಾಟಿಸಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂವಹನ, ಅಂತರ ವ್ಯಕ್ತಿತ್ವ ಕೌಶಲಗಳ ಅಗತ್ಯತೆ ಕುರಿತು ವಿವರಿಸಿದರು.
ಸಂಸ್ಥೆಯ ಡೀನ್ ಡಾ.ಸುದರ್ಶನ ರಾವ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ ಮಾನವಿಕ ಶಾಸ್ತ್ರ ವಿಭಾಗದ ವಕ್ತಾರ ಡಾ.ದಿವಾಕರ್ ಪಿ., ಜಿಇ ಸೌತ್ ಏಷ್ಯಾ ಸ್ವತಂತ್ರ ಸಲಹೆಗಾರ, ಮಾಜಿ ಮುಖ್ಯ ಸಿಎಕ್ಸ್‌ಒ ಅಧಿಕಾರಿ ಭಾಸ್ಕರ್ ಪೈ ಮಾತನಾಡಿ, ಮೌಖಿಕ ಸಂವಹನ, ಭಾವನಾತ್ಮಕ ಬುದ್ಧಿಮತ್ತೆ, ವೃತ್ತಿಪರ ನಡವಳಿಕೆ, ಉದ್ಯೋಗ ಸ್ಥಳದ ಸಿದ್ಧತೆ ಎಂಬ ಪ್ರಮುಖ ವಿಷಯಗಳ ಕುರಿತು ಮಾಹಿತಿ ನೀಡಿದರು.