ಸಿರಿಗೇರಿ ಕ್ರಾಸ್ ನಿಂದ ಸಿರಿಗೇರಿಗ್ರಾಮಕ್ಕೆ ವಿದ್ಯುತ್ ಕಂಬಗಳನ್ನು ಹಾಕುತ್ತಿರುವುದು. 
ಜಿಲ್ಲೆ

ಕಾಮಗಾರಿ ಕೈಗೆತ್ತಿಕೊಂಡ ಜೆಸ್ಕಾಂ ಇಲಾಖೆ

ರುದ್ರಪ್ಪ ವಾಲಿ

ಸಿರಿಗೇರಿ: ನಿಮಗಾಗಿ ನಾವು ಸಂಸ್ಥೆ ಸಿರಿಗೇರಿ ಗ್ರಾಮ ಘಟಕದ ವತಿಯಿಂದ ನಿರಂತರ ಜ್ಯೋತಿ ಯೋಜನೆಯಡಿ ಸಿರಿಗೇರಿ ಕ್ರಾಸ್‌ನಿಂದ ಸಿರಿಗೇರಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಇತ್ತೀಚೆಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜೆಸ್ಕಾಂ ಇಲಾಖೆ ಕಾಮಗಾರಿಗೆ ಕೈಗೆತ್ತಿಕೊಂಡಿದೆ.

ವಾರದಿಂದ ವಿದ್ಯುತ್ ಕಂಬಗಳನ್ನು ಹಾಕಲಾಗುತ್ತಿದ್ದು, ಕೊಂಚಿಗೇರಿ, ದಾಸಾಪುರ, ಸಿದ್ದರಾಮಪುರ ಗ್ರಾಮಗಳಿಗೆ ಉಪಯೋಗವಾಗಲಿದೆ. ಮೇ 24ರಂದು ಸಿರಿಗೇರಿಯಲ್ಲಿ ಸಿ ಸಿ ಕ್ಯಾಮರಾ ಅಳವಡಿಸಿ ಎಂಬ ಶೀರ್ಷಿಕೆ ಅಡಿಯಲ್ಲಿ ವಿಜಯವಾಣಿಯಲ್ಲಿ ಸುದ್ದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.