ಜಿಲ್ಲೆ

ಕಾರ್ಮಿಕರ ಹೋರಾಟ ನಿರಂತರ: ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯ ಬಾರ್ ಮಿಲ್, ಪ್ರೆÊಮರಿ ಮಿಲ್ ಘಟಕಗಳು ಆ.10 ರಿಂದ ತಮ್ಮ ಉತ್ಪಾದನೆಯನ್ನು ಮರು ಆರಂಭಿಸುತ್ತಿದ್ದು ಕಾರ್ಖಾನೆಗೆ ಮರು ಜೀವ ಬಂದAತಾಗಿದೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಪರಿಶ್ರಮವೂ ಕಾರಣ. ಆದರೆ ಕಾರ್ಖಾನೆಯನ್ನು ಸಂಪೂರ್ಣವಾಗಿ ತೆರೆಯುವವರೆಗೂ ನಮ್ಮ ಹೋರಾಟ ನಡೆಸಲಾಗುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಹೇಳಿದರು.

ಸುಮಾರು 12 ವರ್ಷಗಳಿಂದಲೂ ಖಾಸಗೀಕರಣ, ಬಂಡವಾಳ ಹಿಂತೆಗೆದAಥಹ ಹಲವು ಸಮಸ್ಯೆಗಳಿಂದಾಗಿ ಮುಚ್ಚುವ ಹಂತ ತಲುಪಿದ್ದ ಕಾರ್ಖಾನೆಯಲ್ಲಿ ಉತ್ಪಾದನಾ ಚಟುವಟಿಕೆಗಳು ಸಂಪೂರ್ಣ ನಿಲ್ಲದಂತೆ ನೋಡಿಕೊಂಡಿದ್ದರು. ಅಲ್ಲದೆ ಮುಚ್ಚಿದ್ದ ಬಾರ್ ಮಿಲ್ ತೆರೆಯಲು ಅಗತ್ಯ ಬಜೆಟ್ ಸಿದ್ಧಪಡಿಸಿ, ಬೇಕಾದ ಕಚ್ಚಾವಸ್ತುಗಳನ್ನು ಕಾರ್ಖಾನೆಗೆ ಸರಬರಾಜು ಆಗುವಂತೆ ಸಂಸದರು ಪ್ರಯತ್ನ ನಡೆಸಿದ್ದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೈಲ್ ಆಡಳಿತ ಮಂಡಳಿಯು ಕಾರ್ಖಾನೆಗೆ ಬಂಡವಾಳ ತೊಡಗಿಸಲು ಸಾಧ್ಯವಿಲ್ಲ ಎಂದು ಕಾರ್ಖಾನೆಯನ್ನು ಖಾಸಗೀಕರಣ ಇಲ್ಲವೆ ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಹಾಗಾಗಿ ಯಾವ ಕಂಪನಿಗಳೂ ಈವರೆಗೂ ಬಂಡವಾಳ ತೊಡಗಿಸಲು ಮುಂದೆ ಬರಲಿಲ್ಲ. ಕೆಲ ತಿಂಗಳ ಹಿಂದೆ ಕ್ಲೋಸರ್‌ಗೆ ಆದೇಶ ನೀಡಲಾಗಿತ್ತು. ಆದರೆ ಕಾರ್ಮಿಕರ ನಿರಂತರ ಹೋರಾಟ ಹಾಗೂ ಸಂಸದರ ನಿರಂತರ ಪ್ರಯತ್ನದಿಂದಾಗಿ ಕ್ಲೋಸರ್ ಆದೇಶ ನೀಡಿದ್ದ ಸೈಲ್ ಆಡಳಿತ ಮಂಡಳಿಯೇ ಇಂದು ಬಾರ್‌ಮಿಲ್, ಪ್ರೆÊಮರಿ ಮಿಲ್ ಘಟಕದಲ್ಲಿ ಆ.10ರಿಂದ ಉತ್ಪಾದನೆ ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂಬ ಸಂದೇಶ ಪ್ರತಿಯನ್ನೂ ವಿಐಎಸ್‌ಎಲ್ ಆಡಳಿತ ಮಂಡಳಿಯ ಅಽಕಾರಿಗಳು ನೋಟಿಸ್ ಹಾಕುವಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದರು.
ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ಮಾತನಾಡಿ, ಕಾರ್ಖಾನೆಯ ವಸ್ತು ಸ್ಥಿತಿಯನ್ನು ಅಗತ್ಯ ದಾಖಲೆಗಳ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಕಾರ್ಮಿಕ ಸಂಘಟನೆಗಳು ಹಾಗೂ ಸಂಸದರು ಯಶಸ್ವಿಯಾಗಿದ್ದಾರೆ. ಅವರ ನಿರಂತರ ಪ್ರಯತ್ನದಿಂದ ಕ್ಲೋಸರ್ ಆದೇಶವಿದ್ದ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡುವಂತಾಗಿದೆ. ಇದು ಕಾರ್ಖಾನೆ ಉಳಿಸಿಕೊಳ್ಳುವ ಒಂದು ಪ್ರಯತ್ನವಾಗಿದ್ದು ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಬಂಡವಾಳ ತೊಡಗಿಸಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಎಂದರು.
ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಕಾರ್ಖಾನೆಗೆ ಶಾಶ್ವತ ಬಂಡವಾಳ ತೊಡಗಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯುತ್ತಿರುತ್ತದೆ. ಇದುವರೆಗಿನ ಹೋರಾಟದಿಂದಲೇ ಘಟಕಗಳು ಆರಂಭವಾಗಲು ಸಾಧ್ಯವಾಗಿದೆ ಎಂದರು.
ಎಐಟಿಯುಸಿ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ನಿವೃತ್ತ ಕಾರ್ಮಿಕ ಸಂಘದ ಅಧ್ಯಕ್ಷ ರಾಮಲಿಂಗಯ್ಯ, ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ತೀರ್ಥಯ್ಯ, ಮಂಜುಳಾ, ಮಂಗಳಾ, ಸುರೇಶಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಕಾರ್ಖಾನೆಯಲ್ಲಿ ನಿರಂತರವಾಗಿ ಉತ್ಪಾದನೆಗಳಾದರೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಉದ್ಯೋಗ ದೊರಕುತ್ತದೆ. ಅಲ್ಲದೆ ಮಂಜೂರಾಗಿರುವ ಗಣಿ ಕೂಡ ತನ್ನ ಕಾರ್ಯ ಆರಂಭಿಸಲಿದೆ. ಆ ಮೂಲಕ ಕಾರ್ಖಾನೆಯನ್ನು ಲಾಭದತ್ತ ಕೊಂಡೊಯ್ಯಬಹುದು. ಇದು ಬಂಡವಾಳ ಹೂಡಿಕೆ ಮೇಲೂ ಪರಿಣಮಿಸುವುದರಿಂದ ಕಾರ್ಖಾನೆಯನ್ನು ಕ್ಲೋಸರ್ ಹಂತದಿAದ ಹೊರತರಬಹುದಾಗಿದೆ. ಸಂಸದರು ಕಾರ್ಮಿಕರಿಗೆ ನಂಬಿಕೆ ಬರುವ ಕೆಲಸ ಮಾಡಿದ್ದಾರೆ.|ಜಿ.ಧರ್ಮಪ್ರಸಾದ್ಬಿಜೆಪಿ ಮಂಡಲ ಅಧ್ಯಕ್ಷ