ಜಿಲ್ಲೆ

ಕಾರ್ಮಿಕರಿಗೆ ಕರ್ನಾಟಕವೇ ಬೆಸ್ಟ್

ಬೆಳಗಾವಿ: ವಿವಿಧ ವೃತ್ತಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಕರ್ನಾಟಕವೇ ಬೆಸ್ಟ್ ಎನಿಸಿದೆ.! ಬಿಹಾರ, ರಾಜಸ್ಥಾನ ಸೇರಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕಾರ್ಮಿಕರ ಪಾಲಿಗೆ ಕರ್ನಾಟಕ ದುಡಿದು ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಫೇವರಿಟ್ ಎನಿಸಿಕೊಂಡಿದೆ.

ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ಕಾರ್ಮಿಕರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿದ್ದರು. ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ಸೇರಿ ಒಟ್ಟು 5,461 ಕಾರ್ಮಿಕರು ತವರು ರಾಜ್ಯದತ್ತ ವಾಪಸ್ ಹೋಗಿದ್ದರು. ಹೀಗಾಗಿ ಸಹಜವಾಗಿ ನಿರ್ಮಾಣ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಎದುರಾಗುತ್ತದೆಂಬ ಆತಂಕ ಮನೆ ಮಾಡಿತ್ತು. ಕಾರ್ಮಿಕರು, ಕಾರ್ಮಿಕ ಇಲಾಖೆ ಅಧಿಕಾರಿಗಳ ಪ್ರಕಾರ ಕರ್ನಾಟಕ ಕಾರ್ಮಿಕರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.ಇಲ್ಲಿ ಹೆಚ್ಚಿನ ಕೂಲಿ ಸಿಗುತ್ತದೆ ಎಂದು ಹೇಳುತ್ತಿದ್ದಾರೆ.

ಟೈಲ್ಸ್ ಹೊಂದಿಸುವ ಕೆಲಸ ಮಾಡುವ ಓರ್ವ ಕಾರ್ಮಿಕನಿಗೆ ಬಿಹಾರ ಸೇರಿ ಇತರ ರಾಜ್ಯದಲ್ಲಿ ದಿನಕ್ಕೆ ಕೇವಲ 100ರೂ. ಕೂಲಿ ಇದ್ದರೆ, ಕರ್ನಾಟಕದಲ್ಲಿ 600 ರೂ. ಇದೆ ಎಂದು ಕಾರ್ಮಿಕರೇ ಹೇಳುತ್ತಾರೆ. ಆದರೆ, ಲಾಕ್‌ಡೌನ್‌ನಿಂದ ಸಂಕಷ್ಟ ದೂರಾದ ಬಳಿಕ ಮತ್ತೆ ಎಂದಿನಂತೆ ನಮ್ಮ ದುಡಿಮೆಗೆ ಮರುಳುತ್ತೇವೆ ಎಂದು ಕೆಲ ಕಾರ್ಮಿಕರು ಹೇಳುತ್ತಾರೆ. ಕೋವಿಡ್-19ನಿಂದಾಗಿ ನಿರ್ಮಾಣ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿದ್ದ ಕಾರ್ಮಿಕರು ತವರಿನತ್ತ ಸಾಗುತ್ತಿದ್ದಾರೆ. ಎಲ್ಲ ಸರಿಹೋದ ಮೇಲೆ ಮತ್ತೆ ಕೆಲಸ ಅರಿಸಿ ಬರುವುದಕ್ಕೆ ನಿಶ್ಚಯಿಸಿದ್ದಾರೆ.

180 ಕಾರ್ಮಿಕರು ನೋಂದಣಿ: ಬೆಳಗಾವಿಯಿಂದ ತವರಿನತ್ತ ತೆರಳಲು 180 ಕಾರ್ಮಿಕರು ಕಾರ್ಮಿಕ ಇಲಾಖೆ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಬಿಹಾರದಿಂದ 11, ಗುಜರಾತ್-2, ಮಧ್ಯಪ್ರದೇಶ-11, ಒಡಿಶಾ-108, ರಾಜಸ್ಥಾನ- 4, ಉತ್ತರ ಪ್ರದೇಶ-9, ಪಶ್ಚಿಮ ಬಂಗಾಳದ 25 ಕಾರ್ಮಿಕರಿದ್ದಾರೆ. ಈ ಕಾರ್ಮಿಕರಿಗೆ ಸದ್ಯಕ್ಕೆ ಸ್ವ ರಾಜ್ಯಗಳಿಗೆ ಹೋಗುವುದಕ್ಕೆ ಶ್ರಮಿಕ ರೈಲುಗಳಿಲ್ಲ. ಬೆಂಗಳೂರು ಅಥವಾ ಇನ್ನಿತರ ಕಡೆಗಳಿಂದ ಶ್ರಮಿಕ ರೈಲಿನ ವ್ಯವಸ್ಥೆ ಮಾಡಿದರೆ, ಅಲ್ಲಿನ ನೋಡಲ್ ಅಧಿಕಾರಿಗಳಿಗೆ ಬೆಳಗಾವಿಯಲ್ಲಿರುವ ಕಾರ್ಮಿಕರ ಮಾಹಿತಿ ನೀಡಲು ಅಧಿಕಾರಿಗಳು ಚಿಂತನೆ ಮಾಡಿದ್ದಾರೆ.

ಜಿಲ್ಲೆಯಿಂದ ತೆರಳಿದ ಕಾರ್ಮಿಕರ ಸಂಖ್ಯೆ: ಜಿಲ್ಲೆಯಿಂದ ಇದುವರೆಗೆ 5,461 ಕಾರ್ಮಿಕರು ಸ್ವ ರಾಜ್ಯಗಳತ್ತ ತೆರಳಿದ್ದಾರೆ. ಇದರಲ್ಲಿ ರಾಜಸ್ಥಾನದ 752, ಉತ್ತರ ಪ್ರದೇಶದ 2,387, ಒಡಿಶಾ 91, ಪಶ್ಚಿಮ ಬಂಗಾಳ 333, ಜಾರ್ಖಂಡ್‌ನ 407, ಬಿಹಾರ 1,180, ಮಧ್ಯಪ್ರದೇಶ 252, ಛತ್ತೀಸ್‌ಗಢ ರಾಜ್ಯದ 59 ಕಾರ್ಮಿಕರಿದ್ದಾರೆ.

ರಿ ಇತರ ರಾಜ್ಯದಲ್ಲಿ ದಿನಕ್ಕೆ ಕೇವಲ 100ರೂ. ಕೂಲಿ ಇದ್ದರೆ, ಕರ್ನಾಟಕದಲ್ಲಿ 600 ರೂ. ಇದೆ ಎಂದು ಕಾರ್ಮಿಕರೇ ಹೇಳುತ್ತಾರೆ. ಆದರೆ, ಲಾಕ್‌ಡೌನ್‌ನಿಂದ ಸಂಕಷ್ಟ ದೂರಾದ ಬಳಿಕ ಮತ್ತೆ ಎಂದಿನಂತೆ ನಮ್ಮ ದುಡಿಮೆಗೆ ಮರುಳುತ್ತೇವೆ ಎಂದು ಕೆಲ ಕಾರ್ಮಿಕರು ಹೇಳುತ್ತಾರೆ. ಕೋವಿಡ್-19ನಿಂದಾಗಿ ನಿರ್ಮಾಣ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿದ್ದ ಕಾರ್ಮಿಕರು ತವರಿನತ್ತ ಸಾಗುತ್ತಿದ್ದಾರೆ. ಎಲ್ಲ ಸರಿಹೋದ ಮೇಲೆ ಮತ್ತೆ ಕೆಲಸ ಅರಿಸಿ ಬರುವುದಕ್ಕೆ ನಿಶ್ಚಯಿಸಿದ್ದಾರೆ.

180 ಕಾರ್ಮಿಕರು ನೋಂದಣಿ: ಬೆಳಗಾವಿಯಿಂದ ತವರಿನತ್ತ ತೆರಳಲು 180 ಕಾರ್ಮಿಕರು ಕಾರ್ಮಿಕ ಇಲಾಖೆ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಬಿಹಾರದಿಂದ 11, ಗುಜರಾತ್-2, ಮಧ್ಯಪ್ರದೇಶ-11, ಒಡಿಶಾ-108, ರಾಜಸ್ಥಾನ- 4, ಉತ್ತರ ಪ್ರದೇಶ-9, ಪಶ್ಚಿಮ ಬಂಗಾಳದ 25 ಕಾರ್ಮಿಕರಿದ್ದಾರೆ. ಈ ಕಾರ್ಮಿಕರಿಗೆ ಸದ್ಯಕ್ಕೆ ಸ್ವ ರಾಜ್ಯಗಳಿಗೆ ಹೋಗುವುದಕ್ಕೆ ಶ್ರಮಿಕ ರೈಲುಗಳಿಲ್ಲ. ಬೆಂಗಳೂರು ಅಥವಾ ಇನ್ನಿತರ ಕಡೆಗಳಿಂದ ಶ್ರಮಿಕ ರೈಲಿನ ವ್ಯವಸ್ಥೆ ಮಾಡಿದರೆ, ಅಲ್ಲಿನ ನೋಡಲ್ ಅಧಿಕಾರಿಗಳಿಗೆ ಬೆಳಗಾವಿಯಲ್ಲಿರುವ ಕಾರ್ಮಿಕರ ಮಾಹಿತಿ ನೀಡಲು ಅಧಿಕಾರಿಗಳು ಚಿಂತನೆ ಮಾಡಿದ್ದಾರೆ.

ಜಿಲ್ಲೆಯಿಂದ ತೆರಳಿದ ಕಾರ್ಮಿಕರ ಸಂಖ್ಯೆ: ಜಿಲ್ಲೆಯಿಂದ ಇದುವರೆಗೆ 5,461 ಕಾರ್ಮಿಕರು ಸ್ವ ರಾಜ್ಯಗಳತ್ತ ತೆರಳಿದ್ದಾರೆ. ಇದರಲ್ಲಿ ರಾಜಸ್ಥಾನದ 752, ಉತ್ತರ ಪ್ರದೇಶದ 2,387, ಒಡಿಶಾ 91, ಪಶ್ಚಿಮ ಬಂಗಾಳ 333, ಜಾರ್ಖಂಡ್‌ನ 407, ಬಿಹಾರ 1,180, ಮಧ್ಯಪ್ರದೇಶ 252, ಛತ್ತೀಸ್‌ಗಢ ರಾಜ್ಯದ 59 ಕಾರ್ಮಿಕರಿದ್ದಾರೆ.

ಬೆಳಗಾವಿಯಲ್ಲಿದ್ದ ಅನ್ಯ ರಾಜ್ಯದ ಕಾರ್ಮಿಕರು ಸ್ವ ರಾಜ್ಯಗಳತ್ತ ತೆರಳಿದ್ದಾರೆ. ಬೇರೆ ರಾಜ್ಯಗಳ ಕೆಲವೇ ಕಾರ್ಮಿಕರು ಊರಿಗೆ ಹೋಗುವುದಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಯಾವ ನಗರದಿಂದ ಶ್ರಮಿಕ ರೈಲು ಹೋಗುತ್ತದೆಯೋ ಅಲ್ಲಿಂದ ಈ ಕಾರ್ಮಿಕರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತೇವೆ. | ವೆಂಕಟೇಶ ಶಿಂಧಿಹಟ್ಟಿ ಕಾರ್ಮಿಕ ಇಲಾಖೆ ಉಪ ಆಯುಕ್ತ, ಬೆಳಗಾವಿ
ಕೆಲಸಕ್ಕೆ ತಕ್ಕಂತೆ ಇಲ್ಲಿ ಸಂಬಳ ಕೊಡುತ್ತಾರೆ. ನಮ್ಮ ರಾಜ್ಯಕ್ಕೆ ಹೋಲಿಸಿದರೆ ದುಡಿಮೆಗೆ ಕರ್ನಾಟಕ ಉತ್ತಮವಾಗಿದೆ.|ರಸ್ತುಂ ಬಿಹಾರ ಕಾರ್ಮಿಕ

| ಜಗದೀಶ ಹೊಂಬಳಿ