ಜಿಲ್ಲೆ

ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತ್ಯು : ಮದುವೆ ಚಪ್ಪರ ಕಳಚುವಾಗ ದುರಂತ

ಸೌಮ್ಯ ಆರ್

ಕಾಸರಗೋಡು : ನಗರದ ತಳಂಗರೆ ತೆರುವತ್ ಎಂಬಲ್ಲಿ ಮದುವೆ ಮನೆಯಲ್ಲಿ ಚಪ್ಪರ ಕಳಚುವಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಬಾಗೇವಾಡಿ ನಿವಾಸಿ ಪ್ರಮೋದ್ ರಾಮಣ್ಣ(30) ಎಂಬುವರು ಮೃತಪಟ್ಟಿದ್ದಾರೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಚೆರ್ಕಳದ ಸಂಸ್ಥೆಯೊಂದು ಚಪ್ಪರದ ಗುತ್ತಿಗೆ ವಹಿಸಿಕೊಂಡಿತ್ತು. ಮದುವೆ ಕಳೆದ ನಂತರ ಚಪ್ಪರ ಇಳಿಸಲು ಪ್ರಮೋದ್‌ರಾಮಣ್ಣ ಹಾಗೂ ಇತರ ಕಾರ್ಮಿಕರು ಆಗಮಿಸಿದ್ದರು. ಚಪ್ಪರದ ಕಬ್ಬಿಣದ ರಾಡ್ ಲಾರಿಗೆ ಹತ್ತಿಸುವಾಗ ಅದು ವಿದ್ಯುತ್ ತಂತಿಗೆ ತಾಗಿ ಶಾಕ್ ತಗುಲಿದೆ. ತಕ್ಷಣ ಪ್ರಮೋದ್ ಅವರನ್ನು ತಳಂಗರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆ ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.