ದೇವನಹಳ್ಳಿ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ನಂತರ ಪಲ್ಟಿಯಾಗಿದ್ದು, ಕಾರ್ಮಿಕ ಮೃತಪಟ್ಟು, 9 ಮಂದಿಗೆ ಗಂಭೀರ ಗಾಯಗಳಾಗಿವೆ.
ಉತ್ತರ ಪ್ರದೇಶ ಮೂಲದ ಸಂತೋಷ ಯಾದವ್ (35) ಮೃತ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಖಾಸಗಿ ಕಂಪನಿಯ 34 ಕಾರ್ಮಿಕರನ್ನು ಮಧ್ಯಾಹ್ನ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಅವಡ ಸಂಭವಿಸಿದೆ.
ಗಾಯಗೊಂಡವರ ಪೈಕಿ ಒಬ್ಬನ ಕೈ ಮೂಳೆ ಮುರಿದಿದ್ದು, ಚಾಲಕ ಸೇರಿ 33 ಕಾರ್ಮಿಕರಿಗೆ ಗಾಯಗಳಾಗಿವೆ. ಕೆಲವರನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಹಾಗೂ ಮತ್ತೆ ಕೆಲವರನ್ನು ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಕಂಪನಿಯು ಅಶೋಕ್ ಎಂಬುವವರ ಮಾಲೀಕತ್ವದ್ದು ಎಂದು ತಿಳಿದುಬಂದಿದೆ.
ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.