ದಾಬಸ್ಪೇಟೆ : ನೆಲಮಂಗಲ ತಾಲೂಕು ಸೋಂಪುರ ಕೈಗಾರಿಕಾ ಪ್ರದೇಶದ ಮೊದಲನೇ ಹಂತದಲ್ಲಿರುವ ಖಾಸಗಿ ಕಂಪನಿಯಲ್ಲಿ ಕರ್ತವ್ಯನಿರತ ಕಾರ್ಮಿಕ ಮಂಗಳವಾರ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ಸೋಂಪುರ ಹೋಬಳಿ ನರಸೀಪುರದ ಎನ್.ಸಿ.ಗಿರೀಶ್ ಗೌಡ (29) ಮೃತ.
ಏನಿದು ಪ್ರಕರಣ?: ಹಲವು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ಗೌಡ ಸೋಮವಾರ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದಾಗ ವಾಂತಿ ಭೇದಿಯಾಗಿದೆ. ಅಸ್ವಸ್ಥಗೊಂಡರೂ ಕೆಲಸ ಮುಂದುವರಿಸಿದ್ದಾನೆ. ಮಂಗಳವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದೊಯ್ಯುವಂತೆ ತಿಳಿಸಲಾಗಿದೆ. ಅಲ್ಲಿಂದ ತುಮಕೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಕಂಪನಿ ರ್ನಿಲಕ್ಷ್ಯವೇ ಕಾರಣ? : ಅಸ್ವಸ್ಥಗೊಂಡ ಮಗನನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕಂಪನಿಯಲ್ಲಿ ಯಾವುದೇ ವಾಹನ ಇರಲಿಲ್ಲ. ಸಾವಿಗೆ ಕಂಪನಿಯ ರ್ನಿಲಕ್ಷ್ಯವೇ ಕಾರಣ ಎಂದು ಗಿರೀಶ್ಗೌಡ ಪಾಲಕರು ಆರೋಪಿಸಿದ್ದಾರೆ. ಸಾವಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮರಣೋತ್ತರ ಪರೀೆಗೂ ಬಿಡದೆ ಶವವನ್ನು ಆಂಬುಲೆನ್ಸ್ನಲ್ಲಿಯೇ ಇಟ್ಟು ಕೆಲಕಾಲ ಕುಟುಂಬದವರು ಪ್ರತಿಭಟನೆ ನಡೆಸಿದ್ದರು. ಬಳಿಕ ದಾಬಸ್ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆದು ಸ್ವಗ್ರಾಮ ನರಸೀಪುರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.