ಜಿಲ್ಲೆ

ಕಂಟೇನರ್ ಲಾರಿ ಹಾಯ್ದು ಕಾರ್ಮಿಕ ಸಾವು

ವೀರೇಶ ಸೌದ್ರಿ

ಯಲ್ಲಾಪುರ: ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕನ ಮೇಲೆ ಕಂಟೇನರ್ ಲಾರಿ ಹಾಯ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಅಮ್ಜದ್ (40) ಮೃತ ಕಾರ್ಮಿಕ. ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಆ ವೇಳೆ ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದ ಕಾರ್ಮಿಕನ ಮೇಲೆ ಕಂಟೇನರ್ ಹಾಯ್ದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಕಂಟೇನರ್ ಹೊರಟಿತ್ತು. ಕಂಟೇನರ್ ಲಾರಿ ಪಲ್ಟಿಯಾಗಿ, ಜಖಂಗೊಂಡಿದೆ.

ಘಟನೆಯಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸಂಚಾರ ಸುಗಮಗೊಳಿಸಿದರು.