ಲೋಕಾಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಕ್ಷರದವ್ವ ಸಾವಿತ್ರಬಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು. ಗೋವಿಂದ ಕೌಲಗಿ, ಹೊಳಬಸು ಕಾಜಗಾರ, ರಂಗನಾಥ ಚಿಪ್ಪಲಕಟ್ಟಿ, ಮಾರುತಿ ರಂಗಣ್ಣವರ, ಅರುಣ ನರಗುಂದ ಇತರರಿದ್ದಾರೆ. 
ಜಿಲ್ಲೆ

ಶೋಷಿತರ ಧ್ವನಿಯಾಗಿ ದುಡಿದರು

ಲೋಕಾಪುರ : ಮಹಿಳಾ ಶಿಕ್ಷಣ, ಜಾತಿ ಸಮಸ್ಯೆಗಳ ವಿರುದ್ಧ ಹೋರಾಡುವ ಮೂಲಕ ಸಮಾಜದಲ್ಲಿ ಶೋಷಿತರ ಧ್ವನಿಯಾಗಿ, ಸಬಲೀಕರಣಕ್ಕಾಗಿ ಸಾವಿತ್ರಿಬಾಯಿ ಅವರು ನೀಡಿದ ಕೊಡುಗೆಗಳು ಅವಿಸ್ಮರಣೀಯ ಎಂದು ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಕ್ಷರದವ್ವ ಸಾವಿತ್ರಬಾಯಿ ಫುಲೆ ಅವರ ಜನ್ಮದಿನದ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, 19ನೇ ಶತಮಾನದ ಪ್ರಮುಖ ಸಮಾಜ ಸುಧಾರಕರ ಸಾಲಿನಲ್ಲಿ ನಿಲ್ಲುವ ಧೀಮಂತ ಮಹಿಳೆ ಎಂದರು.

ಜಿಲ್ಲಾ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯ ಗೋವಿಂದ ಕೌಲಗಿ ಮಾತನಾಡಿ, ಭಾರತದ ಮೊದಲು ಮಹಿಳಾ ಶಿಕ್ಷಕಿಯಾಗಿರುವ ಸಾವಿತ್ರಿಬಾಯಿ ಫುಲೆ ಮಹಿಳಾ ಸಮುದಾಯಕ್ಕೆ ಸ್ಫೂರ್ತಿ ನೀಡಿ, ಶೋಷಿತ ಸಮುದಾಯದ ಮಹಿಳೆಯರಿಗೆ ಅಕ್ಷರ ಕಲಿಸಿ ಅವರನ್ನು ಮೇಲೆತ್ತುವಲ್ಲಿ ಶ್ರಮಿಸಿದ್ದಾರೆ ಎಂದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಮಾರುತಿ ರಂಗಣ್ಣವರ, ಅರುಣ ನರಗುಂದ, ಶಂಕರ ಪೂಜಾರಿ, ರಂಗನಾಥ ಚಿಪ್ಪಲಕಟ್ಟಿ, ಲಾಲಸಾಬ ನಧಾಪ, ಉಮೇಶ ಕಾಗಿ, ಮಹೇಶ ಹುಗ್ಗಿ ಮತ್ತಿತರರಿದ್ದರು.