ದೊಡ್ಡಬಳ್ಳಾಪುರ ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಶಾಸಕ ಧೀರಜ್​ ಮುನಿರಾಜು ಚಾಲನೆ ನೀಡಿದರು. ತಹಸೀಲ್ದಾರ್​ ವಿಭಾವಿದ್ಯಾ ರಾಠೋಡ್​, ಪೌರಾಯುಕ್ತ ಕಾರ್ತಿಕೇಶ್ವರ್​, ನಗರಸಭೆ ಅಧ್ಯೆ ಸುಮಿತ್ರಾ, ಉಪಾಧ್ಯಕ್ಷ ಮಲ್ಲೇಶ್​, ಸದಸ್ಯರಾದ ಪದ್ಮನಾಭ, ಎಂ.ಜಿ.ಶ್ರೀನಿವಾಸ ಇತರರರು ಇದ್ದರು. 
ಜಿಲ್ಲೆ

ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮಾಡಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ : ನಗರಸಭೆಗೆ ಕೆಲಸ ಮಾಡುವ ಅಧಿಕಾರಿಗಳು ಬೇಕು. ಜನರ ಕೆಲಸವನ್ನು ರ್ನಿದಿಷ್ಟಾವಧಿಯಲ್ಲಿ ಮಾಡಬೇಕು ಎಂದು ಶಾಸಕ ಧೀರಜ್​ ಮುನಿರಾಜು ಸೂಚನೆ ನೀಡಿದರು.ನಗರಸಭೆ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಆಹವಾಲು ಸ್ವೀಕರಿಸಿ ಮಾತನಾಡಿದ ಅವರು, ಈ ವರ್ಷ ದೊಡ್ಡಬಳ್ಳಾಪುರದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ನಗರಸಭೆ ಕಸದ ನಿರ್ವಹಣೆಯ ಬಗ್ಗೆ ಒತ್ತು ನೀಡಬೇಕು. ನಗರದಲ್ಲಿ ಸಾಮಾನ್ಯವಾಗಿ ಕಸ ಹಾಕುವ ಜಾಗಗಳನ್ನು ಗುರುತಿಸಿ ಇಲ್ಲಿ ಕಸ ಹಾಕದಂತೆ ಜಾಗೃತಿ ಮೂಡಿಸಬೇಕು. ಮಾರ್ಷಲ್​ಗಳನ್ನು ನೇಮಿಸುವ ಮೂಲಕ ಕಸ ಹಾಕುವವರಿಗೆ ದಂಡ ವಿಧಿಸಬೇಕು. ಜತೆಗೆ ಪ್ರತಿ ಕಟ್ಟಡಕ್ಕೂ ಪಿಐಡಿ (ಪ್ರಾಪರ್ಟಿ ಐಡಿ) ನೀಡಬೇಕು. ಈ ಮೂಲಕ ಎಲ್ಲ ಪಿಐಡಿದಾರರು ಕಸ ಹಾಕುವಂತೆ ನೋಡಿಕೊಳ್ಳಬೇಕು. ಜತೆಗೆ ಎಲ್ಲರೂ ಸಮರ್ಪಕ ಕಂದಾಯ ಕಟ್ಟುವ ಬಗ್ಗೆ ಗಮನಹರಿಸಬೇಕು. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೇ ವಾರ್ಡ್​ಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಸೂಚನೆ ನೀಡಿದರು.

ರಸ್ತೆ ಅಗಲೀಕರಣ ಮಾಡುವೆ: ನಗರದಲ್ಲಿ ರಸ್ತೆ ಅಗಲೀಕರಣ ಅವಶ್ಯಕ. ಆದರೆ ನಗರಸಭೆಯಲ್ಲಿ ಇದಕ್ಕೆ ಅನುದಾನದ ಕೊರತೆಯಿಂದ ಸರ್ಕಾರ ಕೂಡ ರಸ್ತೆ ಅಗಲೀಕರಣದ ಭೂಸ್ವಾಧಿನಕ್ಕೆ ಅನುದಾನ ನೀಡುತ್ತಿಲ್ಲ. ಇದಕ್ಕಾಗಿ ನಗರಸಭೆ ಆಸ್ತಿ ಆಧಾರದಲ್ಲಿ 50 ಕೋಟಿ ರೂ. ಸಾಲ ಪಡೆದು ರಸ್ತೆ ಅಗಲೀಕರಣ ಮಾಡುತ್ತೇವೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಮಾರುಕಟ್ಟೆ ನಿರ್ಮಾಣಕ್ಕೂ ಕ್ರಮವಹಿಸಲಾಗುತ್ತದೆ. ಶ್ರೀ ಬಿಎಂಟಿಸಿ ಬಸ್​ ನಿಲ್ದಾಣ ವ್ಯವಸ್ಥೆಯಾಗಲಿದೆ ಎಂದರು.

ಕಾಂಗ್ರೆಸ್​ ಸದಸ್ಯರ ಗೈರು: ನಗರಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ನಗರಸಭಾ ಸದಸ್ಯರು ಗೈರು ಹಾಜರಾಗಿದ್ದರು.

ಕಳೆದ ಬಾರಿ ಕುಂದು ಕೊರತೆ ಸಭೆಯಲ್ಲಿ ಕೊಟ್ಟ ದೂರಿಗೆ ಯಾವುದೇ ಕ್ರಮ ಕೈಗೊಳ್ಳದೆ ಮತ್ತೆ ನಾಮ್​ಕೇವಾಸ್ತೆಗೆ ಕುಂದು ಕೊರತೆ ಸಭೆ ಮಾಡಲಾಗುತ್ತಿದೆ. ಕಳೆದ ಬಾರಿ ನೀಡಿದ ದೂರುಗಳಲ್ಲಿ ಎಷ್ಟು ಬಗೆಹರಿದಿದೆ ಎಂದು ಕೇಳಿದರೆ ಉತ್ತರವೇ ಇಲ್ಲ. ಮತ್ತೆ ದೂರು ನೀಡಿ ಎಂದು ಹೇಳುತ್ತಿರುವುದು ಆಡಳಿತದ ಲೋಪ ಎದ್ದು ತೋರಿಸುತ್ತದೆ. | ಚಿದಾನಂದಮೂರ್ತಿ ಅಧ್ಯಕ್ಷ ಯುವಸಂಚಲನ ಸಂಟನೆ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 25,000 ಆಸ್ತಿಗಳಿವೆ. ಇದರಲ್ಲಿ 15,000 ಮನೆಗಳಿದ್ದು, ಈ ವರ್ಷ 7,000 ಮನೆಗಳ ತೆರಿಗೆ ಸಂಗ್ರಹಿಸಲಾಗಿದ್ದು, 7.80 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಇನ್ನೂ 8,000 ಮನೆಗಳ ಆಸ್ತಿ ತೆರಿಗೆ ಪಾವತಿ ಬಾಕಿಯಿದೆ. ಕಸದ ಸಂಗ್ರಹಣೆಗೂ ಕ್ಯೂಆರ್​ ಕೋಡ್​ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. | ಕಾರ್ತಿಕೇಶ್ವರ್​ ಪೌರಾಯುಕ್ತ, ದೊಡ್ಡಬಳ್ಳಾಪುರ ನಗರಸಭೆ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ನಗರಸಭೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದಿದ್ದಲ್ಲಿ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಿ. | ಕೆ.ಸುಮಿತ್ರಾ ನಗರಸಭಾ ಅಧ್ಯೆ, ದೊಡ್ಡಬಳ್ಳಾಪುರ