ವಿಜಯಪುರದ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಡಾ. ಅರುಣ ಇನಾಮದಾರ, ಡಾ. ಆರ್​.ವಿ. ಕುಲಕರ್ಣಿ ಮತ್ತಿತರರಿದ್ದಾರೆ. 
ಜಿಲ್ಲೆ

ಭಕ್ತಿ, ಶ್ರದ್ಧೆಯಿಂದ ಕಾಯಕ ಮಾಡಿ

ಗಿರೀಶ ಸಗರ

ವಿಜಯಪುರ : ಮಾನವೀಯತೆ ಮತ್ತು ಸಮಾನತೆ ಸಾರಿದ ವಿಶ್ವಗುರು ಬಸವಣ್ಣನವರ ವಿಚಾರಗಳಂತೆ ವೃತ್ತಿಪರರು ಭಕ್ತಿ ಮತ್ತು ಶ್ರದ್ಧೆ ಮೂಲಕ ಕಾಯಕ ಮಾಡಬೇಕು ಎಂದು ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಇನಾಮದಾರ ಹೇಳಿದರು.

ನಗರದ ಬಿಎಲ್​ಡಿಇ ಡೀಮ್ಡ್​ ವಿವಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಬಸವಣ್ಣನವರು ಹೇಳಿದಂತೆ ಕಾಯಕದಲ್ಲಿಯೇ ಕೈಲಾಸವಿದೆ. ನಾವು ಕಾಯಕದಲ್ಲಿ ಶ್ರದ್ಧೆ, ನಿಷ್ಠೆ ಇದ್ದರೆ ಮಾತ್ರ ನಮ್ಮ ವೃತ್ತಿಯಲ್ಲಿ ಸಫಲರಾಗಲು ಸಾಧ್ಯ ಎಂದರು.

ಡೀಮ್ಡ್​ ವಿವಿ ರಿಜಿಸ್ಟ್ರಾರ್​ ಡಾ. ಆರ್​.ವಿ. ಕುಲಕರ್ಣಿ, ಪರೀಾ ನಿಯಂತ್ರಣಾಧಿಕಾರಿ ಡಾ. ಎಸ್​.ಎಸ್​. ದೇವರಮನಿ, ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಆಸ್ಪತ್ರೆಯ ವೈದ್ಯಕಿಯ ಅಧೀಕ ಡಾ. ಆರ್​.ಎಂ. ಹೊನ್ನುಟಗಿ, ಹಣಕಾಸು ಅಧಿಕಾರಿ ಬಿ.ಎಸ್​. ಪಾಟೀಲ, ಡಾ. ಉದಯಕುಮಾರ ನುಚ್ಚಿ, ಡಾ. ಸುರೇಖಾ ಹಿಪ್ಪರಗಿ, ಸತೀಶ ಪಾಟೀಲ, ಸಹಾಯಕ ಕಾನೂನು ಅಧಿಕಾರಿ ಐ.ಬಿ. ಮಠಪತಿ ಮತ್ತಿತರರಿದ್ದರು.