ಸಾಗರದ ವರದಾ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ಈಶ್ವರ ನಾಯ್ಕ, ಬಿ.ಎಂ.ಮಂಜಪ್ಪ, ಹುಚ್ಚಪ್ಪ ಮಂಡಗಳಲೆ, ವೈ.ಕೆ.ರವಿಕುಮಾರ್, ಕೊಲ್ಲೂರಯ್ಯ ಇತರರಿದ್ದರು. 
ಜಿಲ್ಲೆ

ಬದ್ಧತೆಯಿಂದ ಕೆಲಸ ಮಾಡಿ: ಕಾಗೋಡು ತಿಮ್ಮಪ್ಪ

Shivamogga - Desk - Vinayakumar D B

ಸಾಗರ: ಗ್ರಾಮೀಣ ಜನರ ಆರ್ಥಿಕ ಜೀವನಾಡಿಯೇ ಸಹಕಾರ ಸಂಘಟನೆಗಳು, ಅವುಗಳನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಹಕಾರಿ ಬಂಧುಗಳು ಪ್ರಾಮಾಣಿಕವಾಗಿ ತೊಡಗಿಕೊಳ್ಳಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ನಗರದ ವರದಾ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ಸಭೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ವರದಾ ಪತ್ತಿನ ಸಹಕಾರ ಸಂಘ ಅತ್ಯಂತ ಸದೃಢವಾಗಿ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಆಡಳಿತ ಮಂಡಳಿ ಬದ್ಧತೆಯಿಂದ ಕೆಲಸ ಮಾಡಿದಾಗ ಮಾತ್ರ ಷೇರುದಾರರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗುತ್ತದೆ. ಸಹಕಾರ ಸಂಘದ ಎಲ್ಲ ಚಟುವಟಿಕೆಗಳನ್ನು ನಾನು ಹಿಂದಿನಿಂದಲೂ ಪ್ರೋತ್ಸಾಹಿಸಿಕೊಂಡು ಬಂದಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಈಶ್ವರ ನಾಯ್ಕ ಕುಗ್ವೆ, ವರದಾ ಪತ್ತಿನ ಸಹಕಾರ ಸಂಘ ವಾರ್ಷಿಕ 11 ಕೋಟಿ ವಹಿವಾಟು ನಡೆಸುತ್ತಿದ್ದು 1600ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಬೈಲಾ ತಿದ್ದುಪಡಿ ಮಾಡಲಾಗಿದ್ದು ಮುಂದಿನ ವರ್ಷಗಳಲ್ಲಿ ಹೆಚ್ಚಿನ ಸಾಲ ಸೌಲಭ್ಯ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಉಪಾಧ್ಯಕ್ಷ ಕೊಲ್ಲೂರಯ್ಯ, ನಿರ್ದೇಶಕರಾದ ಬಿ.ಎಂ.ಮಂಜಪ್ಪ, ಹುಚ್ಚಪ್ಪ ಮಂಡಗಳಲೆ, ವೈ.ಕೆ.ರವಿಕುಮಾರ್, ಷಣ್ಮುಖ ಸೂರನಗದ್ದೆ, ಗಿರೀಶ್ ಕೋವಿ, ರಾಧಾ ನಿಂಗಪ್ಪ, ಕೆ.ಹೊಳೆಯಪ್ಪ, ಮಹೇಶ್, ಅಣ್ಣಪ್ಪ, ಟಿ.ರಘುಪತಿ ಇತರರಿದ್ದರು.