ವಿಜಯಪುರ ಹೋಬಳಿಯ ಪಿ.ರಂಗನಾಥಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು. ನಿವೃತ್ತ ಎಸ್‌ಬಿಐ ಬ್ಯಾಂಕ್ ನೌಕರ ನಾರಾಯಣಪ್ಪ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟಗಿರಿಕೋಟೆ 
ಜಿಲ್ಲೆ

ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಇಲ್ಲ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ವಿಜಯಪುರ
ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣವಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ. ಕೇವಲ ಬಿಜೆಪಿ ಹಾಗೂ ಜೆಡಿಎಸ್ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ತಾಲೂಕು ಪಿ.ರಂಗನಾಥಪುರದಲ್ಲಿ ಶಾಲಾ ಮಕ್ಕಳು, ರೈತರು, ಕಾರ್ಮಿಕರಿಗೆ ಅನುಕೂಲವಾಗಲೆಂದು ವಿಜಯಪುರ, ಚೆಂದೇನಹಳ್ಳಿ, ಕೊಮ್ಮಸಂದ್ರ, ಎ ರಂಗನಾಥಪುರ, ಪಿ ರಂಗನಾಥಪುರ, ಸಿಎನ್ ಹೊಸೂರು, ಚದಲಪುರ ಮೂಲಕ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರಲು ಕೆಎಸ್‌ಆರ್ಟಿಸಿ ಬಸ್‌ಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ ಹೊರವಲಯದ ಚಿಕ್ಕಬಳ್ಳಾಪುರ ರಸ್ತೆಯ ಚಿಕ್ಕನಹಳ್ಳಿಯಿಂದ ವೆಂಕಟಪುರ ಗಡಿವರಿಗೆ 40 ಕೋಟಿ ರೂಪಾಯಿವೆಚ್ಚದಲ್ಲಿ ಚತುಷ್ಪತ ಕಾಮಗಾರಿ ನಡೆದಿದ್ದು, ಸುಮಾರು 50 ವರ್ಷಗಳವರೆಗೆ ಈ ಕಾಮಗಾರಿ ಕೆಲಸ ಶಾಶ್ವತವಾಗಿರಲಿದೆ ಎಂದರು.
ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಿಂದ ನಂದಿ ಉಪಚಾರ ಹೋಟೆಲ್‌ವರೆಗೆ ಚತುಷ್ಪಥ ನಿರ್ಮಿಸಲು 25 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಕಾರ್ಯಗತಗೊಳ್ಳುತ್ತದೆ. ಗ್ರಾಮಗಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ರೂಪಿಸಿದ್ದು, ಮುದ್ದೇನಹಳ್ಳಿ ಹಾಗೂ ಬೂದಿಗೆರೆ ಗ್ರಾಮ ಪಂಚಾಯಿತಿಗಳಿಗೆ ಎರಡೆರಡು ಕೋಟಿ ಹಣ ನೀಡಲಾಗುತ್ತಿದ್ದು, ಅಕ್ಟೋಬರ್ 5ರಿಂದ ಪ್ರತಿದಿನ ನಾಲ್ಕು ಪಂಚಾಯಿತಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ್ಲ ತಹಸೀಲ್ದಾರ್ ಇಒ, ಪಿಡಿಒ ಸೇರಿ ಎಲ್ಲ ಅಧಿಕಾರಿವರ್ಗದವರನ್ನು ಜತೆಯಲ್ಲೇ ಕರೆದುಕೊಂಡು ಬಂದು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ವಿವರಿಸಿದ ಮುನಿಯಪ್ಪ, ಎರಡು ತಿಂಗಳಿಂದ ಐದು ಕೆಜಿ ಪಡಿತರದ ಹಣ ಮಹಿಳೆಯರ ಖಾತೆಗೆ ವರ್ಗಾವಣೆಯಾಗಿಲ್ಲ, ಮುಂದಿನವಾರ ಡಿಬಿಟಿ ಮೂಲಕ ವರ್ಗಾಯಿಸಲಾಗುವುದೆಂದು ತಿಳಿಸಿದರು.
ಗೊಡ್ಲು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷರಾದ ಕೆಂಪಣ್ಣ, ಆನಂದಮ್ಮ, ಸದಸ್ಯರಾದ ಓಂ ಶಕ್ತಿ ದೇವಾಲಯದ ಮುನಿಆಂಜನಪ್ಪ ಸ್ವಾಮಿ, ಜಿಪಂ ಮಾಜಿ ಸದಸ್ಯ ಚಂದೇನಹಳ್ಳಿ ಮುನಿಯಪ್ಪ, ವಕೀಲರಾದ ಪ್ರಕಾಶ್,ನಟರಾಜ್, ನಿವೃತ್ತ ಜಿಲ್ಲಾಧಿಕಾರಿ ಕಚೇರಿಗಳ ನೌಕರ ಸುಬ್ರಹ್ಮಣ್ಯ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಶಿವಾನಂದ್, ಕೆಎಸ್‌ಆರ್‌ಟಿಸಿ ಅಧಿಕಾರಿ ವಾಜೀದ್ ಉಪಸ್ಥಿತರಿದ್ದರು.