ಜಿಲ್ಲೆ

ಕಾಯಕ ನಮಗೆಲ್ಲರಿಗೂ ಆದರ್ಶ

ಲಲಾಟಾಕ್ಷ ಎಸ್

ಕೊಳ್ಳೇಗಾಲ: ನೇಕಾರ ಸಮಾಜದ ಮೂಲ ಪುರುಷ ಹಾಗೂ ವಚನಕಾರ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತ ವತಿಯಿಂದ ಆಚರಣೆ ಮಾಡಲಾಯಿತು.


ದೇವಾಂಗ ಸಮುದಾಯದ ಮುಖಂಡರು ಹಾಗೂ ತಹಸೀಲ್ದಾರ್ ಮಂಜುಳಾ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಬಳಿಕ ತಹಸೀಲ್ದಾರ್ ಎಂ.ಮಂಜುಳಾ ಮಾತನಾಡಿ, ದೇವರ ದಾಸಿಮಯ್ಯ ಅವರು 11ನೇ ಶತಮಾನದಲ್ಲಿ ವಚನ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದವರು. ಇವರನ್ನು ಆದ್ಯ ವಚನಕಾರ ಎಂದೇ ಕರೆಯಲಾಗುತ್ತದೆ. ಇವರ ಬದುಕು, ಕಾಯಕ ನಮಗೆಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.


ನಗರಸಭೆ ಸದಸ್ಯ ಚಿಂತು ಪರಮೇಶ್, ದೇವಾಂಗ ಸಮಾಜದ ಮುಖಂಡರಾದ ಪರಮೇಶ್ವರಯ್ಯ, ನಿರಂಜನ್ ರವಿ, ವಿಜಯ್ ಕುಮಾರ್, ಮಧುಚಂದ್ರ, ಶಾಂತರಾಜು, ಲಕ್ಷ್ಮಣ್, ರವಿ, ಗೋಪಿ ಮತ್ತಿತರಿದ್ದರು.