ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಾಜಿ ಸಂಸದ ವೈ ದೇವೇಂದ್ರಪ್ಪ ಉದ್ಘಾಟಿಸಿದರು. ಟಿಪಿಇಒ ಷಣ್ಮುಖಪ್ಪ ಕೆ, ಬಿಆರ್‌ಪಿ ನಾಗರಾಜ, ಎಸ್ಡಿಎಂಸಿ ಅಧ್ಯಕ್ಷ ಕೆ ರಂಗಪ್ಪ, ಗ್ರಾಪಂ ಅಧ್ಯಕ್ಷೆ ಹಾಲಮ್ಮ, ಮುಖ್ಯಶಿಕ್ಷಕ ಮಾಲತೇಶ ಪಾಟೀಲ್, ಶಿಕ್ಷಕರಾದ ಬಂದೋಳ್ ಸಿದ್ದೇಶ, ಅರ್ಜುನ ಪರುಸಪ್ಪ, ಪದ್ಮಲತಾ, ಪ್ರಮುಖರಾದ ಪ್ರಶಾಂತ್ ಪಾಟೀಲ್, ಕೆ.ನೀಲಾಂಬಿಕೆ, ನಂದ್ಯಮ್ಮ, ಅಡ್ಡಿ ಚನ್ನವೀರಪ್ಪ ಇತರರಿದ್ದರು. 
ಜಿಲ್ಲೆ

ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸಿ

ರುದ್ರಪ್ಪ ವಾಲಿ

ಹರಪನಹಳ್ಳಿ: ಮಕ್ಕಳಿಗೆ ಬಾಲ್ಯದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಿ ಎಂದು ಮಾಜಿ ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು.

ತಾಲೂಕಿನ ಅರಸೀಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸರ್ಕಾರಿ ಶಾಲೆಗೆ ಶತಮಾನೋತ್ಸವ ತುಂಬಿದೆ. ಈ ಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಹಲವಾರು ಉನ್ನತ ಸ್ಥಾನಗಳನ್ನು ಹೊಂದಿರುವುದು ನಮ್ಮ ಹೆಮ್ಮೆ. ಮಕ್ಕಳಿಗೆ ಕಲಿಯಲು ಯೋಗ್ಯವಾದ ವಾತಾವರಣವಿದ್ದು, ಅದರ ಸಂಪೂರ್ಣ ಲಾಭವನ್ನು ಮಕ್ಕಳು ಪಡೆಯಬೇಕು ಎಂದರು.

ಸಾಮಾನ್ಯವಾಗಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಮಧ್ಯಮ ವರ್ಗದವರಾಗಿರುತ್ತಾರೆ. ಹಾಗಾಗಿ ಆ ಬಡ ಮಕ್ಕಳ ಶ್ರೇಯೋಭಿವೃದ್ಧಿ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ನಾನು ಕೂಡ ಇದೇ ಶಾಲೆಯಲ್ಲಿ ಕಲಿತು ಸಂಸದನಾಗಿದ್ದೇನೆ ಎಂದರು.

ಬಿಇಒ ಎಚ್ ಲೇಪಾಕ್ಷಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಐಎಎಸ್, ಐಪಿಎಸ್, ಹಾಗೂ ಇತರ ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗೆ ಹೆಚ್ಚು ಹೆಚ್ಚು ಮಕ್ಕಳನ್ನು ಕರೆ ತರುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

ಮಕ್ಕಳು ಸ್ವಗ್ರಾಮಗಳಲ್ಲಿಯೇ ವಿದ್ಯಾಭ್ಯಾಸ ಮಾಡುವುದರಿಂದ ಪಾಲಕರು ನಿತ್ಯ ಪಡುವ ಕಷ್ಟಗಳನ್ನು ಬಾಲ್ಯದಿಂದಲೇ ಗಮನಿಸುತ್ತಾ ಬರುತ್ತಾರೆ. ಹಾಗಾಗಿ ಅವರಿಗೆ ಬಾಲ್ಯದಲ್ಲಿ ಜೀವನದ ಪ್ರತಿಯೊಂದು ಅನುಭವದ ಪರಿಚಯವಾಗುತ್ತದೆ ಎಂದರು.