ಕೆ.ಆರ್.ಸಾಗರ: ಮಜ್ಜಿಗೆಪುರ ಗ್ರಾಮದಲ್ಲಿ ಆಂಜನೇಯಸ್ವಾಮಿ ಕುಂಬಾರ ಕ್ಷೇಮಾಭಿವೃದ್ಧಿ ಸಂಘವನ್ನು ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಉದ್ಘಾಟಿಸಿದರು.
ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ನಾಮಫಲಕ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ಕೇವಲ ಸಂಘ ಮಾಡಿದರೆ ಸಾಲದು, ಸಂಘಟನೆ ಮುಖ್ಯ. ಸಮುದಾಯದ ಎಲ್ಲರನ್ನು ಒಗ್ಗೂಡಿಸಿ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಅವರ ಒಳಿತಿಗಾಗಿ ಶ್ರಮಿಸಬೇಕು. ಇದು ಫಲಕದಲ್ಲಿ ಮಾತ್ರ ಉಳಿಯಬಾರದು. ನಿಮ್ಮ ಸಮುದಾಯದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದರು.
ಮಂಡ್ಯ ಜಿಲ್ಲಾ ಕುಂಬಾರ ಜಾಗೃತಿ ವೇದಿಕೆ ಅಧ್ಯಕ್ಷ ಕೃಷ್ಣ, ಜಿಲ್ಲಾ ಮುಖಂಡ ಸಂದೇಶ್, ಮೈಸೂರು ಜಿಲ್ಲಾ ಕುಂಬಾರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್, ಮಜ್ಜಿಗೆಪುರ ಕುಂಬಾರ ಸಂಘದ ಅಧ್ಯಕ್ಷ ವೆಂಕಟೇಶ, ಉಪಾಧ್ಯಕ್ಷ ಕೃಷ್ಣ, ಕಾರ್ಯದರ್ಶಿ ರಾಜು, ಗ್ರಾ.ಪಂ ಮಾಜಿ ಸದಸ್ಯ ಪ್ರಭಾಕರ್, ಮುಖಂಡರಾದ ನರಸಪ್ಪ, ಚಿನ್ನಸ್ವಾಮಿ,ಗವಿಸ್ವಾಮಿ, ಬಸವರಾಜು, ರಾಮು, ರೋಹಿತ್ ಸೇರಿದಂತೆ ಕುಂಬಾರ ಸಮಾಜದ ಬಾಂಧವರು, ಮಜ್ಜಿಗೆಪುರದ ಗ್ರಾಮಸ್ಥರು, ಜಿಲ್ಲಾ ಜಾಗೃತಿ ವೇದಿಕೆ ಮುಖಂಡರು ಇದ್ದರು.