ಜಿಲ್ಲೆ

ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ

ತುಮಕೂರು ಡೆಸ್ಕ್

 ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ

ತಿಪಟೂರು: ನಮ್ಮ ಸಮಾಜದ ಏಳಿಗೆಗಾಗಿ ನೊಳಂಬ ಸಮಾಜದ ಬಂಧುಗಳು ಪಣತೊಡಬೇಕು ಎಂದು ಹಳೇಬೀಡು ಪುಷ್ಪಗಿರಿ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಕೆ.ಬಿ.ಕ್ರಾಸ್​ನಲ್ಲಿರುವ ರಂಭಾಪುರಿ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ನೊಳಂಬ ಸಂಗಮ ಜಾತ್ರೆ ಸಮಾವೇಶದ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುವ ಸಮಾಜದ ಕಾರ್ಯಕ್ರಮಗಳಿಗೆ ನಮ್ಮ ಒಂದು ದಿನವನ್ನು ಮೀಸಲಿಡಬೇಕು. ಉನ್ನತ ಸ್ಥಾನದಲ್ಲಿರುವವರು ತಮ್ಮ ದುಡಿಮೆಯಲ್ಲಿ ಶೇ.1ರಷ್ಟು ಹಣವನ್ನು ಸಮಾಜದ ಅಭಿವೃದ್ಧಿಗಾಗಿ ಮೀಸಲಿಡಬೇಕು. ಸಮಾಜದ ವಿದ್ಯಾಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ಶೇ.10ರಷ್ಟು ಸೀಟುಗಳನ್ನು ಸಮಾಜದವರಿಗೆ ಮೀಸಲಿಡಬೇಕು ಎಂಬ ಮೂರು ಅಂಶದ ಕಾರ್ಯಸೂಚಿ ಪಾಲಿಸುವಂತೆ ಮತ್ತು ಸಮಾಜದ ಅಭಿವೃದ್ಧಿ ಶ್ರಮಿಸುವಂತೆ ತಿಳಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿ ತುಮಕೂರು ಶಾಸಕ ಜ್ಯೋತಿಗಣೇಶ್​ ಮಾತನಾಡಿ, ನಮ್ಮ ಸಮಾಜದ ವಿದ್ಯಾರ್ಥಿಗಳು ಕೈಗಾರಿಕಾ, ಸಂಶೋಧನಾ ೇತ್ರದಲ್ಲಿ ಮುಂದೆ ಬರಬೇಕು. ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸಬೇಕು. ಸ್ಪರ್ಧಾತ್ಮಕ ಪರೀೆಗಳ ತರಬೇತಿ ಕೇಂದ್ರಗಳನ್ನು ರಾಜ್ಯದ ಹಲವು ಕಡೆ ತೆರೆದು ನಮ್ಮ ಸಮಾಜದವರಿಗೆ ಉದ್ಯೋಗ ಗಳಿಸಲು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

ನೊಳಂಬ ಸ್ವಯಂಸೇವಕ ಸಂದ ಅಧ್ಯಕ್ಷ ಡಾ.ಧನಂಜಯ್​ ಮಾತನಾಡಿ, ರಾಜ್ಯದ ಎಲ್ಲ ತಾಲೂಕು, ಹೋಬಳಿಮಟ್ಟದಲ್ಲಿ ನಮ್ಮ ನೊಳಂಬ ಸಮಾಜವನ್ನು ಒಗ್ಗೂಡಿಸುವ ಕಾರ್ಯ ನಡೆಯುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಅಪಾರ ನೊಳಂಬ ಸಮಾಜದವರಿದ್ದು, ಈ ಬಾರಿ ತುಮಕೂರು ಜಿಲ್ಲೆಯಲ್ಲಿಯೇ ನೊಳಂಬ ಜಾತ್ರೆ ಮಾಡುತ್ತಿದ್ದೇವೆ. ಮುಂದೆ ನೊಳಂಬ ಸಮಾಜದ ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾಬ್ಯಾಸ ಹಾಗೂ ಹಾಸ್ಟಲ್​ ಸೌಲಭ್ಯ ಕಲ್ಪಸಲು ಪ್ರಯತ್ನಿಸುತ್ತೇವೆ ಎಂದರು.

ನೊಳಂಬ ಸಮಾಜದ ನಾನೂರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬೇಲೂರು ಮಾಜಿ ಶಾಸಕ ಕೆ.ಎಸ್​.ಲಿಂಗೇಶ್​, ಸೌಮ್ಯ ಸುಧಾಕರ್​, ಮುಖಂಡರಾದ ರಾಯಸಚಿದ್ರ ರವಿ, ಚಿನ್ಮಯ್​ ಚಿಗಟೇರಿ, ಪರಮೇಶ್ವರಪ್ಪ, ನವಿಲೆ ಪರಮೇಶ್​ ಉಪಸ್ಥಿತರಿದ್ದರು.