ನೆಲಮಂಗಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಎನ್.ಗಣೇಶ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. 
ಜಿಲ್ಲೆ

ಬಸ್‌ನಿಲ್ದಾಣ ಕಾಮಗಾರಿ ವಿಳಂಬ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಅಧಿಕಾರಿಗಳಿಗೆ ನೆಲಮಂಗಲ ನಗರಸಭೆ ಅಧ್ಯಕ್ಷ ಎನ್.ಗಣೇಶ್ ತರಾಟೆ

ನೆಲಮಂಗಲ: ನಗರದಲ್ಲಿ ಹೈಟೆಕ್ ಆಗಿ ನಿರ್ವಾಣವಾಗುತ್ತಿರುವ ಬಸ್ ನಿಲ್ದಾಣ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಎನ್.ಗಣೇಶ್ ಹಾಗೂ ಬಿಎಂಟಿಸಿ ಅಡಳಿತಾಧಿಕಾರಿ ವೇಣುಗೋಪಾಲ್ ಸೋಮವಾರ ಸ್ಥಳ ಪರಿಶೀಲಿಸಿದರು.

ಇತ್ತೀಚೆಗೆ ಬಸ್ ನಿಲ್ದಾಣದ ಬಳಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬಸ್‌ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಸ್ ನಿಲ್ದಾಣ ಕಾಮಗಾರಿ ಆರಂಭ ಹಾಗೂ ಪ್ರಗತಿ ಕುರಿತು ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿದ್ದು, ಕಂಡು ಬಂದಿತ್ತು.

ಅಧಿಕಾರಿಗಳಿಗೆ ತರಾಟೆ: ನಗರದಲ್ಲಿ ನಿರ್ವಾಣವಾಗುತ್ತಿರುವ ಬಸ್ ನಿಲ್ದಾಣ ಕಾಮಗಾರಿ ವಿಳಂಬದಿಂದಾಗಿ ಜನಸಾವಾನ್ಯರು ಸಂಚಾರಸಿಕ್ಕಿನ ಸಮಸ್ಯೆ ಎದುರಿಸುತ್ತಾರೆ. ಅಲ್ಲದೇ ಹಲವು ಅಪಘಾತಗಳೂ ಸಂಭವಿಸಿ, ಸಾಕಷ್ಟು ಸಾವು-ನೋವುಗಳು ಉಂಟಾಗಿವೆ. ಇನ್ನಾದರೂ ಅಧಿಕಾರಿ, ಗುತ್ತಿಗೆದಾರರು ಕಾಮಗಾರರನ್ನು ತರಾಟೆ ತೆಗೆದುಕೊಂಡರಲ್ಲದೆ, ಕಾಮಗಾರಿಗೆ ವೇಗ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ಸೂಚಿಸಿದರು.

ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ, ನಗರಸಭೆ ಉಪಾಧ್ಯಕ್ಷ ಆನಂದ್, ಪೌರಾಯುಕ್ತ ಮನುಕುವಾರ್, ಬಿಎಂಟಿಸಿ ವಾಜಿ ನಿರ್ದೇಶಕ ಮಿಲ್ಟ್ರಿ ಮೂರ್ತಿ, ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶಿಲ್ಪಾ, ಸಂತೋಶ್‌ಶೆಟ್ಟಿ, ಮುಖಂಡ ಮುನಿಯಪ್ಪ, ಗಂಗಾಧರ್, ನರಸಿಂಹಮೂರ್ತಿ, ಕೆ.ವಸಂತ್, ಚನ್ನಬಸವರಾಜು, ಅರುಣ್‌ಕುವಾರ್ ಉಪಸ್ಥಿತರಿದ್ದರು.

45 ಕೋಟಿ ರೂ. ವೆಚ್ಚ

47 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭಗೊಂಡು 2 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಇರುವುದು ಬೇಸರದ ಸಂಗತಿ. ಬಸ್ ನಿಲ್ದಾಣ ಕಾಮಗಾರಿ ವಿಳಂಬದಿಂದ ಸಾರ್ವಜನಿಕರು ತೊಂದರೆ ಎದುರಿಸುತ್ತಾರೆ. ಜತೆಗೆ ನಗರದಲ್ಲಿ ಸಂಚಾರ ಸಿಕ್ಕು ಸಮಸ್ಯೆ ಹೆಚ್ಚಾಗಿ, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ವಾಣವಾಗಿದೆ. ಅಧಿಕಾರಿಗಳು ಬಸ್ ನಿಲ್ದಾಣ ಮುಂಭಾದಲ್ಲಿರುವ ತಡೆಗೋಡೆಯನ್ನು ತೆರವುಗೊಳಿಸಿ, ಬಸ್ ಸಂಚಾರಕ್ಕೆ ಅನುವು ವಾಡಿಕೊಡಬೇಕು. ನಿಲ್ದಾಣದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ಹೇಳಿದರು.

ತಾತ್ಕಾಲಿಕ ಸಂಚಾರಕ್ಕೆ ಅನುವು

ನಗರದಲ್ಲಿ 1 ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಸಂಚರಿಸುತ್ತವೆ. ತಾತ್ಕಾಲಿಕ ಬಸ್ ಸಂಚಾರಕ್ಕೆ ಅನುವು ವಾಡಿಕೊಡುವ ನಿಟ್ಟಿನಲ್ಲಿ ಬಸ್ ನಿಲ್ದಾಣ ನಿರ್ವಾಣ ವಾಡಲಾಗಿದೆ. ಶಾಸಕರ ನೇತೃತ್ವದಲ್ಲಿ ಸಭೆ ಕರೆದು ಚಾಲನೆ ನೀಡಲಾಗುವುದು. ನೆಲ ಮಹಡಿಯಲ್ಲಿ ಬಿಎಂಟಿಸಿ ಬಸ್ ಸಂಚಾರ ಹಾಗೂ ಮೊದಲ ಮಹಡಿಯಲ್ಲಿ ಕೆಎಸ್‌ಆರ್‌ಟಿಸಿ ಸಂಚಾರ ಸೇರಿ ಮುಂಭಾಗದಲ್ಲಿ ವಾಣಿಜ್ಯ ಮಳಿಗೆಗಳು ನಿರ್ವಾಣವಾಗಲಿವೆ ಎಂದು ಬಿಎಂಟಿಸಿ ಅಡಳಿತಾಧಿಕಾರಿ ವೇಣುಗೋಪಾಲ್ ವಾಹಿತಿ ನೀಡಿದರು.