ಜಿಲ್ಲೆ

ಆರ್‌ಬಿಐ ನಿರ್ದೇಶನದಂತೆ ಕೆಲಸ ಮಾಡಿ

ದಾಂಡೇಲಿ: ನಗರ ವ್ಯಾಪ್ತಿಯ ಮೈಕ್ರೋ ಫೈನಾನ್ಸ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ನಗರದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಏರ್ಪಡಿಸಲಾಗಿತ್ತು.

ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾತನಾಡಿ, ಎಲ್ಲ ಮೈಕ್ರೋ ಫೈನಾನ್ಸ್‌ನವರು ಆರ್‌ಬಿಐ ನಿರ್ದೇಶನದಂತೆ ನೋಂದಣಿ ಮಾಡಿಕೊಳ್ಳಬೇಕು. ಆರ್‌ಬಿಐ ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಗ್ರಾಹಕರಿಂದ ಆಕರಣೆ ಮಾಡಬಾರದು. ಸಾಲ ನೀಡುವಾಗ ಗ್ರಾಹಕರಿಗೆ ಸಾಲ ಮರುಪಾವತಿ ಮಾಡಲು ಅರ್ಹತೆ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಂಡು ನೀಡಬೇಕು.

ಸಾಲಗಾರರಿಂದ ಸಾಲ ವಸೂಲಿ ಮಾಡಲು ಸಂಜೆ ಐದು ಗಂಟೆ ನಂತರ ಮನೆಗೆ ಹೋಗಬಾರದು. ಆರ್‌ಬಿಐ ಕಾಲ ಕಾಲಕ್ಕೆ ನೀಡುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾಲಗಾರರಿಗೆ ಫೈನಾನ್ಸ್‌ಗಳಿಂದ ಅನವಶ್ಯಕ ಕಿರುಕುಳವಾಗುತ್ತಿದೆ ಅಂತ ದೂರು ಬಂದಲ್ಲಿ ಆಯಾ ಫೈನಾನ್ಸ್‌ನ ಪ್ರಮುಖರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪಿಎಸ್‌ಐ ಕಿರಣ ಪಾಟೀಲ, ಮೈಕ್ರೋ ಫೈನಾನ್ಸ್‌ಗಳ ಮ್ಯಾನೇಜರ್, ಬಿಲ್ ಕಲೆಕ್ಟರ್‌ಗಳು ಇದ್ದರು.