ಸಿದ್ದಾಪುರ: ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅದಕ್ಕೆ ತಕ್ಕಂತೆ ಗ್ರಾಪಂ ಸರ್ವ ಸದಸ್ಯರು ಕಾರ್ಯೋನ್ಮುಖವಾಗಿದ್ದೇವೆ ಎಂದು ಗ್ರಾಪಂ ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಹೇಳಿದರು.
ಗ್ರಾಮದ 9ನೇ ವಾರ್ಡ್ ಎಸ್ಸಿ ಕಾಲನಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಜನರು ನಮ್ಮನ್ನು ಗೆಲ್ಲಿಸಿದ್ದಾರೆ.
ಜನರ ನಿರೀಕ್ಷೆಗಳಿಗೆ ತಕ್ಕಂತೆ ನಾವು ಕೆಲಸ ಮಾಡಬೇಕು. 25 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡಲಾಗುತ್ತಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಪ್ರಮುಖರಾದ ಹನುಮಂತಪ್ಪ ಕುಷ್ಟಗಿ, ಗೋಪಾಲಪ್ಪ ಒಂಟೆತ್ತು, ಬಸಪ್ಪ ಕಾರಟಗಿ, ಮಾರುತಿ ವಿಭೂತಿ ಖಡಗ, ಬಸವರಾಜ ಮಿರಾಲಿ, ಚಿನ್ನಪ್ಪ ಕಲೀಕೇರಿ, ಮಾರೆಪ್ಪ ಟಿ.ವಿ ಇತರರಿದ್ದರು.