ಕಾರಟಗಿಯ ಕೆಪಿಎಸ್‌ನಲ್ಲಿ ಸಂತೆಯೋಳಗಣ ಮೌನ ಕವನ ಸಂಕಲನದ ಪುಸ್ತಾಕಾವಲೋಕನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಲೇಖಕ ಪವನ್ ಕುಮಾರ ಗುಂಡೂರು ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಮಾಜಿ ಗೌರವಕಾರ್ಯದರ್ಶಿ ಭೀಮಣ್ಣ ಕರಡಿ, ಶಿಕ್ಷಕರಾದ ಬಸವರಾಜ ರ್ಯಾವಳದ, ರಮೇಶ ಬನ್ನಿಕೊಪ್ಪ, ಕವಿ ಚನ್ನಬಸವ ಆಸ್ಪರಿ ಇತರರಿದ್ದರು. 
ಜಿಲ್ಲೆ

ಮಾತು ಕಾಲದ ದೊಡ್ಡ ಅಪಾಯ: ಲೇಖಕ ಪವನ್ ಕಳವಳ

Kopala - Desk - Eraveni

ಕಾರಟಗಿ: ಮಾತುಗಾರನಿಗೆ ಚರಿತ್ರೆಯಲ್ಲಿ ಜಾಗವಿಲ್ಲ. ಬರೆಹಗಾರನಿಗೆ ಮಾತ್ರ ಸ್ಥಾನವಿದೆ. ಹಾಗಾಗಿ ಮಾತು ಈ ಕಾಲದ ದೊಡ್ಡ ಅಪಾಯ ಎಂದು ಲೇಖಕ ಪವನ್ ಕುಮಾರ್ ಗುಂಡೂರು ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಸ್ಪಂದನ ಓದು ಹೊತ್ತಿಗೆ ಬಳಗ ಶನಿವಾರ ಏರ್ಪಡಿಸಿದ್ದ ಲೇಖಕ ಚನ್ನಬಸವ ಆಸ್ಪರಿ ಅವರ ‘ಸಂತೆಯೋಳಗಣ ಮೌನ’ ಪುಸ್ತಕಾವಲೋಕನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕವಿತೆ ಮಾತನಾಡಬೇಕೇ ಹೊರತು ಮಾತು ಕವಿತೆಯಾಗಬಾರದು. ಅತಿಯಾದ ಮಾತು ಆತ್ಮವಂಚನೆಯೇ ಸರಿ. ಸಹೃದಯ, ಧ್ಯಾನಸ್ಥ ಸ್ಥಿತಿಯಲ್ಲಿರುವ ಕವಿ ಮಾತ್ರ ಅತ್ಯುತ್ತಮವಾದ ಕವಿತೆಗಳನ್ನು ರಚಿಸಲು ಸಾಧ್ಯ.

ಈ ಕವನ ಸಂಕಲನದಲ್ಲಿ ಧ್ಯಾನ ಮತ್ತು ಮೌನಗಳ ಆಚೆ ಗುಪ್ತಗಾಮಿನಿಯಾಗಿ ಆಧ್ಯಾತ್ಮವನ್ನು ಸಹ ಹೇಳಲಾಗಿದೆ. ಕಳೆದ ಹತ್ತು ವರ್ಷಗಳ ಕಾಲಾವಧಿಯಲ್ಲಿ ಜಿಲ್ಲೆಯಲ್ಲಿ ಬಂದ ಅತ್ಯಂತ ಮಹತ್ವದ ಕಾವ್ಯ ಸಂಕಲನ ಇದು.

ಧ್ಯಾನ ಮತ್ತು ರೂಮಿ ಪ್ರೇರಣೆ: ಸದಾ ಧ್ಯಾನಸ್ಥ ಸ್ಥಿತಿಯಲ್ಲಿ ಇರುತ್ತೇನೆ. ನನ್ನ ಕಾವ್ಯಗಳ ಮೇಲೆ ರೂಮಿ ಪ್ರಭಾವ ತುಂಬಾ ಇದೆ. 
ಕಾಲದ ಘಟನೆಗಳಿಗೆ ಮುಲಾಮು ನೀಡಲಾಗಿಲ್ಲ. ಆದರೆ, ಮಿಡಿದಿದ್ದೇನೆ.