ಗದಗ: ಅಕ್ಕನ ಬಳಗದಲ್ಲಿ ನಡೆದ ಜಂಗಮ ಮಹಿಳಾ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ಶ್ರೀಮತಿ ಪಾರ್ವತಿದೇವಿ ಮಾಳೆಕೊಪ್ಪಮಠ ವಹಿಸಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತ ಸಮಾಜದ ಏಳ್ಗೆಗಾಗಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಹಾಗೆ ಶೈಕ್ಷಣಿಕವಾಗಿ ನಾವು ಹೆಚ್ಚು ಬಲಾಢ್ಯರಾಗುವ ನಿಟ್ಟಿನಲ್ಲಿ ಎಲ್ಲ ಯುವತಿಯರು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಟ್ಟು ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಸೋಣ ಎಂದು ತಿಳಿಸಿದರು.
ಉದ್ಘಾಟನೆಯನ್ನು ಶ್ರೀಮತಿ ವಿಜಯಲಕ್ಷಿ ಹಿರೇಮಠ ಹಾಗೇ ಶ್ರೀಮತಿ ನಾಗರತ್ನಾ ಹುಬ್ಳಿಮಠ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಶಾಂತಾದೇವಿ, ಗಿರಿಜಾದೇವಿ, ಗೌರಮ್ಮ, ಸುಶೀಲಮ್ಮ, ಕಾಂಚನಮಾಲಾ, ಉಮಾದೇವಿ, ಕಲಾವತಿ ಅಮ್ಮ, ಅನ್ನಪೂರ್ಣಮ್ಮ, ಅನ್ನಪೂರ್ಣಮ್ಮ ಮಾಳೆಕೊಪ್ಪಮಠ, ಮಂಜುಳಮ್ಮ, ಗಿರಿಜಾದೇವಿ ನಾಲ್ವತ್ತವಾಡಮಠ ಈ ಎಲ್ಲ ಹಿರಿಯರನ್ನು ಗೌರವಿಸಲಾಯಿತು. ಎಲ್ಲ ಹಿರಿಯರು ಅತ್ಯಂತ ಸಂತೋಷಪಟ್ಟು ಹೀಗೆ ನಮ್ಮ ಸಮಾಜವನ್ನೇ ಮುನ್ನೆಡೆಸಿಕೊಂಡರು. ಹೆಚ್ಚು, ಹೆಚ್ಚು ಸಂಘಟನೆ ಆಗಿರಿ ಎಂದು ತಿಳಿಸಿದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಶ್ವಿನಿ ಮಾಳೆಕೊಪ್ಪಮಠ ನಡೆಸಿಕೊಟ್ಟರು. ಪ್ರಸಾದ ಸೇವೆಯನ್ನು ಕಾರ್ತಿಕ ಶಿಗ್ಲಿಮಠ ವಹಿಸಿದರು. ವೇದಿಕೆ ಮೇಲೆ ಪ್ರೀತಿ ಶಿವಪ್ಪಯ್ಯನಮಠ, ಪಾರ್ವತಿ ಶಾಬಾದಿಮಠ, ನಿರ್ಮಲಾ ಹುಬ್ಳಿಮಠ, ಅಕ್ಕಮ್ಮ ಗುರುಸ್ವಾಮಿಮಠ, ಸುವರ್ಣ ವಸ್ತçದ, ಸುವರ್ಣ ಮದರಿಮಠ, ಲಲಿತಾ ಹಿರೇಮಠ, ಶೋಭಾ ಸಂಶಿಮಠ, ಶಕುಂತಲಾ ಮಠದ, ಸುನೀತಾ ಹಿರೇಮಠ, ಅನ್ನಪೂರ್ಣ ಮಾಳೆಕೊಪ್ಪಮಠ, ಸುಮಂಗಲಾ ಮಾಳೆಕೊಪ್ಪಮಠ, ಪುಷ್ಪಾ ಮಾಳೆಕೊಪ್ಪಮಠ, ಅರುಣಾ ಮಂಗಲಾನಾಲ್ವತ್ತವಾಡಮಠ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ನುಡಿಯನ್ನು ಶ್ರೀಮತಿ ಶಾರದಾ ಹಿರೇಮಠ ನಡೆಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ನಿರೂಪಣೆಯನ್ನು ಶ್ರೀಮತಿ ಶಶಿರೇಖಾ ಶಿಗ್ಲಿಮಠ ನಡೆಸಿಕೊಟ್ಟರು.