ತುಮಕೂರು: ಇನ್ನೂ ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ರಸ್ತೆಗಿಳಿಯಲಿವೆ ನಿರ್ಭಯಾ ಬೈಕ್ ! ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯಡಿ ಜಿಲ್ಲೆಯ ಪೊಲೀಸರಿಗೆ 41 ಬೈಕ್‌ಗಳನ್ನು ನೀಡಲಾಗಿದೆ. ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಬಂಧ ದೂರುಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲೆಯ ಎಲ್ಲಾ ಠಾಣೆಗೂ ಈ ಬೈಕ್ ನೀಡಲಾಗಿದೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ 41 ಸಿಬ್ಬಂದಿಗೆ ಇಂದು ಸಂಜೆ ಹಿರೋಗ್ಲಾಮರ್ ಬೈಕ್‌ಗಳ ಕೀಗಳನ್ನು ಹಸ್ತಂತಾರಿಸಿದ ಎಸ್ಪಿ ಡಾ.ಕೆ.ವಂಶಿಕೃಷ್ಣ ಹಸಿರುನಿಶಾನೆ ತೋರಿದರು.