ಜಿಲ್ಲೆ

ಸಂಘಟನೆ ಮಹಿಳೆಯರ ಸಂಕಷ್ಟಕ್ಕೆ ದನಿಯಾಗಲಿ: ಅಜೀಂ ಪ್ರೇಮ್ ಜೀ ಫೌಂಡೇಷನ್ ಪ್ರತಿನಿಧಿ ಬಿ.ಟಿ.ರವಿ ಕರೆ

ಮಂಡ್ಯ: ಸೇವಾ ಮನೋಭಾವದಿಂದ ಚಾಲನೆಗೊಂಡಿರುವ ಸಂಸ್ಥೆಯು ಮಹಿಳೆಯರ ಸಂಕಷ್ಟಕ್ಕೆ ದನಿಯಾಗಬೇಕೆಂದು ಅಜೀಂ ಪ್ರೇಮ್ ಜೀ ಫೌಂಡೇಷನ್ ಪ್ರತಿನಿಧಿ ಬಿ.ಟಿ.ರವಿ ಕರೆ ನೀಡಿದರು.

ತಾಲೂಕಿನ ಮುದಗಂದೂರು ಗ್ರಾಮದಲ್ಲಿ ಆಯೋಜಿಸಿದ್ದ ವೀರ ವನಿತೆಯರ ಮಹಿಳಾ ಮಂಡಳಿ ಸಂಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಥೆಯು ದೀರ್ಘಕಾಲ ಸಕ್ರಿಯರಾಗಲು ಪರಸ್ಪರ ಸಹಕಾರ, ಆಡಳಿತ ಸೇವೆಯಲ್ಲಿ ಪಾರದರ್ಶಕತೆ, ನಿರಂತರ ಸೇವೆ ನಿಯಮಗಳನ್ನು ಪಾಲನೆ ಮಾಡಬೇಕು. ಇದರಿಂದ ಮಹಿಳೆಯರ ಅಭಿವೃದ್ಧಿ ಜತೆಗೆ ಸಮಾಜದ ಮುನ್ನೆಲೆಗೆ ಬರಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಗಜಲಕ್ಷ್ಮೀ ವಹಿಸಿದ್ದರು. ಗೌರವಾಧ್ಯಕ್ಷೆ ಗಾಯತ್ರಿ, ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಪುಷ್ಪವತಿ, ಶಿಕ್ಷಕ ಪುಟ್ಟಸ್ವಾಮಿ, ಫೌಂಡೇಷನ್‌ನ ಪೂಜಾ ಇತರರಿದ್ದರು. ಇದೇ ಸಂದರ್ಭದಲ್ಲಿ ಮುದಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 21 ಮಹಿಳೆಯರು ಪ್ರತಿಜ್ಞೆ ಮಾಡಿದರು.