ಎಚ್.ಡಿ.ಕೋಟೆ ತಾಲೂಕಿನ ಮಾದಾಪುರದ ಚಂದ್ರ ಮೌಳೇಶ್ವರ ರೈತ ಮಹಿಳಾ ಉತ್ಪಾದಕರ ಕಂಪನಿಯಿಂದ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಿವಲಿಂಗಯ್ಯ, ಸತೀಶ್ ಇದ್ದರು. 
ಜಿಲ್ಲೆ

ಮಾದಾಪುರದಲ್ಲಿ ಮಹಿಳಾ ದಿನಾಚರಣೆ

ಹಂಪಾಪುರ: ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಚಂದ್ರಮೌಳೀಶ್ವರ ಮಹಿಳಾ ರೈತ ಉತ್ಪಾದಕರ ಕಂಪನಿ ವತಿಯಿಂದ ಶನಿವಾರ ಮಹಿಳಾ ದಿನ ಆಚರಿಸಲಾಯಿತು.

ಕಂಪನಿಯ ಪ್ರತಿನಿಧಿ ಶಿವಲಿಂಗಯ್ಯ ಮಾತನಾಡಿ, ಮಹಿಳೆಯರಿಗೆ ಆರ್ಥಿಕವಾಗಿ ಹಾಗೂ ಸ್ವಾವಂಬಿಯಾಗಿ ಬೆಳೆಯುವಂತೆ ಸರ್ಕಾರದಿಂದ ಸಿಗುವ ಸೌಕರ್ಯಗಳ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಮಹಿಳೆಯರೇ ಉತ್ಪಾದಿಸಿರುವ ಉತ್ಪನ್ನಗಳು ಹಾಗೂ ಸಾಂಬಾರ್ ಪೌಡರ್, ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಾಮನಹಳ್ಳಿ ಹುಂಡಿ, ಕುಣಿಗಲ್, ಹಂಪಾಪುರದ ಮತ್ತು ಇತರ ಊರುಗಳಿಂದ ಆಗಮಿಸಿದ್ದ ರೈತ ಮಹಿಳೆಯರಿಗೆ ಮಡಕ್ಕೆ ಒಡೆಯುವುದು, ಲೆಮನ್ ಸ್ಪೂನ್, ಬಾಲ್ ಇನ್ ದಿ ಬಾಸ್ಕೆಟ್ ಮತ್ತು ಇತರ ಆಟವನ್ನು ಆಡಿಸುವ ಮೂಲಕ ಗೆದ್ದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಿಆರ್‌ಪಿಡಿ ಟಿ.ಸಿ. ಸತೀಶ್, ಸಿಇಒ ಲಾವಣ್ಯ, ಅಧ್ಯಕ್ಷರಾದ ವೀಣಾ, ಉಪಾಧ್ಯಕ್ಷರಾದ ಸುಧಾಮಣಿ, ನಿರ್ದೇಶಕರಾದ ಸುಮಿತ್ರಾ, ಉಮಾಶ್ರೀ, ಸುಲೋಚನಾ ಮತ್ತು ರೈತ ಮಹಿಳೆಯರು ಇತರರು ಹಾಜರಿದ್ದರು.